ಮುಜಾಫರ್ ನಗರ : ಮುಜಾಫರ್ ನಗರದಲ್ಲಿ ಮಹಿಳೆಯೋರ್ವಳು ತನ್ನ ಪತಿ 2ನೇ ಪತ್ನಿಯೊಂದಿಗೆ ವಾಸವಿದ್ದ ಹಿನ್ನೆಲೆಯಲ್ಲಿ ಕೋಪಗೊಂಡು ಗಂಡನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದಾಳೆ. 

ಮುಜಾಫರ್ ನಗರದ ಮಿಮ್ಲಾನ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಕ್ಷಣವೇ ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ಮೊದಲ ಪತ್ನಿಗೆ ಮಗುವಾಗದ ಹಿನ್ನೆಲೆಯಲ್ಲಿ ಆತ 2ನೇ ವಿವಾಹವಾಗಿದ್ದ.  ಕಳೆದ ಕೆಲ ದಿನಗಳ ಹಿಂದಷ್ಟೇ 2ನೇ ಪತ್ನಿಗೆ ಮಗು ಜನಿಸಿತ್ತು ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಅನಿಲ್ ಕಪೆರ್ವಾನ್ ಹೇಳಿದ್ದಾರೆ. 

ಕಳೆದ ಕೆಲ ದಿನಗಳಿಂದಲೂ ಕೂಡ 2ನೇ ಪತ್ನಿಯ ಮನೆಯಲ್ಲಿ ವಾಸವಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾಗಿ ಹೇಳಲಾಗಿದೆ. ಈ ಸಂಬಂಧ ಇದೀಗ ಮೊದಲ ಪತ್ನಿ ವಿರುದ್ಧ ದೂರು ದಾಖಲು ಮಾಡಲಾಗಿದೆ.