ಉತ್ತರ ಪ್ರದೇಶದಲ್ಲಿ 7 ನೇ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಶೇ. 60.03 ರಷ್ಟು ಮತದಾನವಾಗಿದೆ.

ಮಿರ್ಜಾಪುರ (ಮಾ.08): ಉತ್ತರ ಪ್ರದೇಶದಲ್ಲಿ 7 ನೇ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಶೇ. 60.03 ರಷ್ಟು ಮತದಾನವಾಗಿದೆ.

40 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 51 ಮಹಿಳೆಯರು ಸೇರಿದಂತೆ ಒಟ್ಟು 535 ಅಭ್ಯರ್ಥಿಗಳು ಕಣದಲ್ಲಿದ್ದರು. 76.87 ಲಕ್ಷ ಪುರುಷರು, 64.99 ಲಕ್ಷ ಮಹಿಳೆಯರು ಮತ ಚಲಾಯಿಸಿದ್ದು, ಒಟ್ಟು 1.41 ಕೋಟಿ ಮತದಾರರು ಮತದಾನ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು ಎಲ್ಲಾ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಸಂಪೂರ್ಣ ಬಿಗಿಭದ್ರತೆಯೊಂದಿಗೆ ಇಂದು ಬೆಳಿಗ್ಗೆ ಮತದಾನ ಆರಂಭಿಸಿದ್ದು, ಪ್ರಧಾನಿ ಮೋದಿಯವರ ಕ್ಷೇತ್ರ ವಾರಣಾಸಿ ಕುತೂಹಲದ ಮತದಾನ ಕೇಂದ್ರವಾಗಿತ್ತು.