ಎಬ್ಲೇಜ್ ಇನ್ಫೋ ಸೊಲ್ಯೂಷನ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿ ಇದರ ಮೂಲಕ ಆನ್ಲೈನ್ನಲ್ಲಿ ಸುಮಾರು 7 ಲಕ್ಷ ಜನರಿಗೆ 3700 ಕೋಟಿ ವಂಚನೆ ಮಾಡಿದ್ದಾರೆ.
ನೊಯ್ಡಾ(ಫೆ.03): ಇದನ್ನು ದೇಶದಅತೀ ದೊಡ್ಡ ಆನ್'ಲೈನ್ ವಂಚನೆ ಎನ್ನ ಬಹುದು. ಉತ್ತರಪ್ರದೇಶದ ನೊಯ್ಡಾದಲ್ಲಿ ಆನ್ ಲೈನ್ ಮೂಲಕ ಸುಮಾರು 7 ಲಕ್ಷ ಜನರಿಗೆ ಬರೊಬ್ಬರಿ 3700 ಕೋಟಿ ವಂಚನೆ ನಡೆದಿದ್ದು, ಈ ಬೃಹತ್ ಜಾಲವನ್ನು ಲಖನೌ ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಅನುಭವ್ ಮಿಟ್ಟಲ್, ಶ್ರೀಧರ್ ಪ್ರಸಾದ್ ಮತ್ತು ಮಹೇಶ್ ದಯಾಳ್ ಎಂಬುವವರು ನೊಯ್ಡಾದ ಸೆಕ್ಟರ್-63ಯಲ್ಲಿ ಎಬ್ಲೇಜ್ ಇನ್ಫೋ ಸೊಲ್ಯೂಷನ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿ ಇದರ ಮೂಲಕ ಆನ್ಲೈನ್ನಲ್ಲಿ ಸುಮಾರು 7 ಲಕ್ಷ ಜನರಿಗೆ 3700 ಕೋಟಿ ವಂಚನೆ ಮಾಡಿದ್ದಾರೆ. ಅಂತೆಯೇ ಸುಮಾರು 3700 ಕೋಟಿ ರೂ. ವಂಚನೆ ಕುರಿತು ದಾಖಲೆ ಸಂಗ್ರಹಿಸಿದ್ದು, ಈ ಪೈಕಿ 500 ಕೋಟಿ ರು.ಮೌಲ್ಯದ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
