ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಒಂದೆಲ್ಲಾ ಒಂದು ಪ್ರಕರಣಗಳು, ಹೇಳಿಕೆಗಳು ಕಾಂಗ್ರೆಸ್ ಗೆ ಇರಿಸು ಮುರಿಸು ತರುತ್ತಲೇ ಇವೆ. ಅಂಥದ್ದೆ ಒಂದು ಘಟನೆಗೆ ಕಾಂಗ್ರೆಸ್ ವಕ್ತಾರರ ಪರೀಕ್ಷೆ ಕಾರಣವಾಗಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರು ಪಕ್ಷದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದಾರೆ.

ನವದೆಹಲಿ[ಜೂ. 29] ಪಕ್ಷದ ವಕ್ತಾರ ಹುದ್ದೆಗೆ ನಡೆಸಲಾದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಾಟ್ಸಪ್ ನಲ್ಲಿ ಲೀಕ್‌ ಆಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗೂ ಆಹಾರವಾಗಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರು ಎಡವಟ್ಟು ಮಾಡಿಕೊಂಡಿದ್ದಾರೆ.

ಪಕ್ಷದ ವಕ್ತಾರ ಹುದ್ದೆ ಆಯ್ಕೆಗಾಗಿ ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿ (ಯುಪಿಸಿಸಿ) ತನ್ನ ಸದಸ್ಯರಿಗೆ ಪರೀಕ್ಷೆಯೊಂದನ್ನು ನಡೆಸಿತ್ತು. ಸುಮಾರು 70 ಮಂದಿ ಈ ಪರೀಕ್ಷೆಯನ್ನು ದಿಢೀರಾಗಿ ಎದುರಿಸಿದ್ದರು. ಆದರೆ ಅಭ್ಯರ್ಥಿಗಳು ಯಾವ ಒತ್ತಡವಿಲ್ಲದೆ ಪರೀಕ್ಷೆ ಎದುರಿಸಿದರು.

ಮಧ್ಯ ಪ್ರದೇಶದ ಚುನಾವಣೆ ಎದುರಾಗುತ್ತಿದ್ದು ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ಅತ್ಯುತ್ತಮರನ್ನು ಆಯ್ಕೆ ಮಾಡಲು ಪರೀಕ್ಷೆ ನಡೆಸಲಾಗಿತ್ತು. ಆದರೆ ಪರೀಕ್ಷೆಗೂ ಮುನ್ನವೇ ಪೇಪರ್ ವಾಟ್ಸಪ್ ಗೋಡೆಯ ಮೇಲಿತ್ತು!