ಕಾಶಿ ವಿಶ್ವನಾಥ ಸ್ಫೋಟಿಸುವುದಾಗಿ ಎಲ್ಇಟಿ ಬೆದರಿಕೆ

First Published 6, Jun 2018, 4:45 PM IST
UP on alert after ‘LeT letter’ threatens to blow up Kashi temples
Highlights

ಭಾರತೀಯ ಸೇನೆಯಿಂದ ಹೈರಾಣಗಿ ಕಳೆದ ಕೆಲವು ದಿನಗಳಿಂದ ಬಿಲ ಸೇರಿದ್ದ ಭಯೋತ್ಪಾದಕರು, ಇದೀಗ ಮತ್ತೆ ಹೆಡೆ ಎತ್ತಿದಂತೆ ಕಾಣುತ್ತಿದೆ. ಹಲವು ದಿನಗಳಿಂದ ಬಚ್ಚಿಕೊಳ್ಳಲು ಜಾಗ ಸಿಗದೇ ಪರದಾಡುತ್ತಿದ್ದ ಲಷ್ಕರ್ ಉಗ್ರರು, ಇದೀಗ ಕಾಶಿ ವಿಶ್ವನಾಥ ದೇವಸ್ಥಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಲಕ್ನೋ(ಜೂ.6): ಕಾಶಿ ವಿಶ್ವನಾಥ ಮತ್ತು ಕೃಷ್ಣ ಜನ್ಮಭೂಮಿ ಸ್ಫೋಟಿಸುವುದಾಗಿ ಲಷ್ಕರ್-ಎ-ತೋಯ್ಬಾ ಸಂಘಟನೆ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರ ಘೋಷಣೆ ಮಾಡಿದ್ದು, ರಾಜ್ಯದ ಪ್ರಮುಖ ಸ್ಥಳಗಳಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಲ್ಇಟಿ ಉಗ್ರ ಸಂಘಟನೆಯ ಕಮಾಂಡೆರ್ ಮೌಲಾನಾ ಅಂಬು ಶೇಖ್, ಕಳೆದ ತಿಂಗಳು ನೈರುತ್ಯ ರೈಲ್ವೇ ಗೆ ಪತ್ರ ರವಾನಿಸಿದ್ದು ಈ ಸಂಬಂಧ ಉತ್ತರಪ್ರದೇಶ ಪೊಲೀಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಮೇ 29 ರಂದು ದೆಹಲಿಯ ನೈರುತ್ಯ ರೈಲ್ವೆ ಈ ಪತ್ರವನ್ನು ಸ್ವಿಕರೀಸಿದ್ದು ಪತ್ರದಲ್ಲಿ ಶಹಾನಪುರ ಮತ್ತು ಹಪುರ್ ಸೇರಿದಂತೆ ಹಲವು ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಇದೇ ಜೂನ್ 8-10ರಂದು ಕೃಷ್ಣ ಜನ್ಮಭೂಮಿ ಮಥುರಾ ಮತ್ತು ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ.

loader