Asianet Suvarna News Asianet Suvarna News

ಯೋಗಿ ತವರಲ್ಲೇ ಬಿಜೆಪಿಗೆ ಸೋಲು : ಕಳೆದ ಬಾರಿ ದಾಖಲೆ ಅಂತರದಿಂದ ಗೆದ್ದಿದ್ದ ಸಿಎಂ

ಉಪ ಕದನದಲ್ಲಿ ಗೆಲುವಿನ ಗೆರೆ ಬೀರಿದ ಅಖಿಲೇಶ್-ಮಾಯಾವತಿ ಜೋಡಿಗೆ ಕರ್ನಾಟಕ ಸಿಎಂ ಟ್ವೀಟ್ ಮೂಲಕ ಅಭಿನಂದಿಸೋ ಮೂಲಕ ಯೋಗಿ ಆದಿತ್ಯನಾಥ್ ಕಾಲೆಳೆದಿದ್ದಾರೆ. ಇತ್ತ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಿದ್ದೇ ಮುಳುವಾಯಿತು ಎಂದು ಯೋಗಿ ಆದಿತ್ಯನಾಥ್ ತಪ್ಪೊಪ್ಪಿಕೊಂಡಿದ್ದಾರೆ.

UP Lok Sabha bypolls Setback for Yogi BJP as SP scores upset win in Gorakhpur

ಭಾರೀ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶ ಹಾಗೂ ಬಿಹಾರ ಉಪಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದೆ. ಎರಡೂ ರಾಜ್ಯಗಳಲ್ಲೂ  ಆಡಳಿತ ವಿರೋಧಿ ಅಲೆ ಇರೋದು ಗೋಚರವಾಗಿದ್ದು. ಮತದಾರರು ಆಡಳಿತ ಸುಧಾರಣೆಯ ಸಂದೇಶ ರವಾನಿಸಿದ್ದಾರೆ. 

ಎಸ್​ಪಿ+ಬಿಎಸ್​ಪಿ ಮೈತ್ರಿಕೂಟದ ಕೊರಳಿಗೆ ವಿಜಯಮಾಲೆ

ಮಾರ್ಚ್‌ 11ರಂದು ನಡೆದಿದ್ದ ಉತ್ತರ ಪ್ರದೇಶದ 2 ಲೋಕಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲೂ ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ. ಸಿಎಂ ಯೋಗಿ ಆದಿತ್ಯನಾಥ್ ತವರು ಕ್ಷೇತ್ರ ಗೋರಖ್​ಪುರದಲ್ಲೇ, ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಮಾಯಾವತಿ ನೇತೃತ್ವದ ಎಸ್​ಪಿ - ಬಿಎಸ್​ಪಿ ಮೈತ್ರಿಕೂಟ ವಿಜಯ ಸಾಧಿಸಿದ್ದು, ಸಿಎಂ ಯೋಗಿ ಆದಿತ್ಯನಾಥ್ ನಿರಾಸೆ ಅನುಭವಿಸಿದ್ದಾರೆ. ಇನ್ನುಳಿದ ಫುಲ್​ಪುರ್ ಕ್ಷೇತ್ರದಲ್ಲೂ ಸಹ ಎಸ್​ಪಿ ಜಯಗಳಿಸಿದೆ.

ಉಪ ಕದನದಲ್ಲಿ ಗೆಲುವಿನ ಗೆರೆ ಬೀರಿದ ಅಖಿಲೇಶ್-ಮಾಯಾವತಿ ಜೋಡಿಗೆ ಕರ್ನಾಟಕ ಸಿಎಂ ಟ್ವೀಟ್ ಮೂಲಕ ಅಭಿನಂದಿಸೋ ಮೂಲಕ ಯೋಗಿ ಆದಿತ್ಯನಾಥ್ ಕಾಲೆಳೆದಿದ್ದಾರೆ. ಇತ್ತ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಿದ್ದೇ ಮುಳುವಾಯಿತು ಎಂದು ಯೋಗಿ ಆದಿತ್ಯನಾಥ್ ತಪ್ಪೊಪ್ಪಿಕೊಂಡಿದ್ದಾರೆ.

ಬಿಹಾರದಲ್ಲಿ  ಸಿಎಂ ನಿತೀಶ್​ಕುಮಾರ್​ಗೆ ಮುಖಭಂಗ

ಬಿಹಾರದ ಅರಾರಿಯಾ ಲೋಕಸಭೆ ಕ್ಷೇತ್ರ ಹಾಗೂ ಜುಹಾನ್​ಬಾದ್ ವಿಧಾನಸಭೆ ಕ್ಷೇತ್ರದಲ್ಲಿ ಲಾಲೂ ಪ್ರಸಾದ್​ರ ಆರ್​ಜೆಡಿ ಪಕ್ಷ ಭರ್ಜರಿ ಜಯ ಭೇರಿ ಬಾರಿಸಿದ್ದು.ಸಿಎಂ ನಿತೀಶ್​ಕುಮಾರ್​ಗೆ ಭಾರೀ ಮುಖಭಂಗವಾಗಿದೆ. ಇನ್ನು ಭಬುವಾ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ಒಟ್ಟಿನಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ಎರಡು ರಾಜ್ಯದಲ್ಲೂ ಆಡಳಿತ ವಿರೋಧಿ ಅಲೆ ಎಚ್ಚರಿಕೆ ನೀಡಿದೆ.

Follow Us:
Download App:
  • android
  • ios