ಗೋಮೂತ್ರದಿಂದ 6 ಬಗೆಯ ಔಷಧ

First Published 5, Feb 2018, 8:32 AM IST
UP govt moots use of cow urine to make medicines
Highlights

ಮನೆಯ ನೆಲ ಸ್ವಚ್ಚಗೊಳಿಸಲು ಗೋ ಮೂತ್ರದಿಂದ ತಯಾರಿಸಿದ ಕ್ಲೀನರ್ ಬಿಡುಗಡೆ ಮಾಡಿದ್ದ ಉತ್ತರಪ್ರದೇಶ ಸರ್ಕಾರ, ಇದೀಗ ಗೋಮೂತ್ರ ಬಳಸಿ ವಿವಿಧ ಬಗೆಯ ಔಷಧಗಳನ್ನು ತಯಾರಿಸಲು ಮುಂದಾಗಿದೆ.

ಲಖನೌ: ಮನೆಯ ನೆಲ ಸ್ವಚ್ಚಗೊಳಿಸಲು ಗೋ ಮೂತ್ರದಿಂದ ತಯಾರಿಸಿದ ಕ್ಲೀನರ್ ಬಿಡುಗಡೆ ಮಾಡಿದ್ದ ಉತ್ತರಪ್ರದೇಶ ಸರ್ಕಾರ, ಇದೀಗ ಗೋಮೂತ್ರ ಬಳಸಿ ವಿವಿಧ ಬಗೆಯ ಔಷಧಗಳನ್ನು ತಯಾರಿಸಲು ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಇಲಾಖೆ ನಿರ್ದೇಶಕ ಡಾ. ಆರ್.ಆರ್.ಚೌಧರಿ, ‘ಪಿತ್ತಜನಕಾಂಗ ಸಮಸ್ಯೆ ಗಳು, ಕೀಲು ನೋವು ಮತ್ತು ರೋಗ ನಿರೋಧಕ ಕೊರತೆ ವಿರುದ್ಧ ಹೋರಾಡಲು ಆಯುರ್ವೇದ ಇಲಾಖೆ ತಯಾರಿಸಿದ 8 ರೀತಿ ಮಾತ್ರೆಗಳಲ್ಲಿ ಗೋಮೂತ್ರ ಬಳಸಲಾಗಿದೆ,’ ಎಂದು ತಿಳಿಸಿದ್ದಾರೆ.

ಗೋಮೂತ್ರ, ಹಾಲು ಮತ್ತು ತುಪ್ಪ ಬಳಸಿ ಆಯುರ್ವೇದ ಔಷಧಿ ತಯಾರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

loader