ಶಾಲಾ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪಾನ್ ಮಸಾಲಾ, ತಂಬಾಕು, ಸಿಗರೇಟ್ ಸೇವಿಸಬಾರದು ಎಂಬ ನಿಯಮ ಜಾರಿಮಾಡಲಾಗಿದೆ.

ಲಖನೌ(ಮಾ.23): ಇಂದು ಜೀನ್ಸ್ ಮತ್ತು ಟೀ-ಶರ್ಟ್ ಬಳಕೆ ಸಾಮಾನ್ಯ ಎಂಬಂತಾಗಿದೆ. ಆದರೆ, ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಮಾತ್ರ ಪ್ರೌಢಶಾಲಾ ಶಿಕ್ಷಕರು ಜೀನ್ಸ್ ಮತ್ತು ಟೀ-ಶರ್ಟ್‌ ತೊಟ್ಟು ಮಕ್ಕಳಿಗೆ ಪಾಠ ಮಾಡುವಂತಿಲ್ಲ.

ಶಿಕ್ಷಕರ ವೃತ್ತಿ ಘನತೆ ಕಾಪಾಡುವ ಸಲುವಾಗಿ ಶಿಕ್ಷಕರು ನೀಟಾಗಿ ಉಡುಗೆ ತೊಟ್ಟುಕೊಳ್ಳಬೇಕು ಎಂದು ಜಿಲ್ಲಾ ತಪಾಸಣಾ ಅಧಿಕಾರಿ ಉಮೇಶ್ ತ್ರಿಪಾಠಿ ಹೇಳಿದ್ದಾರೆ.

ಇದಷ್ಟೇ ಅಲ್ಲದೇ ಶಿಕ್ಷಕರು ಶಾಲಾ ಕೆಲಸದ ವೇಳೆಯಲ್ಲಿ ಮೊಬೈಲ್‌'ನಲ್ಲಿ ಮಾತನಾಡಬಾರದು. ಶಾಲಾ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪಾನ್ ಮಸಾಲಾ, ತಂಬಾಕು, ಸಿಗರೇಟ್ ಸೇವಿಸಬಾರದು ಎಂಬ ನಿಯಮ ಜಾರಿಮಾಡಲಾಗಿದೆ.