ಲಕ್ನೋ : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ದೇಶದಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಗಳಿಸಿದ್ದು ಮತ್ತೊಮ್ಮೆ ಮೋದಿ ಅಲೆ ಎಲ್ಲೆಡೆ ಹರಡಿದೆ. 

ಕರ್ನಾಟಕದಂತೆ ಉತ್ತರ ಪ್ರದೇಶದಲ್ಲಿಯೂ ಕೂಡ 80 ಕ್ಷೇತ್ರಗಳ ಪೈಕಿ  62 ಸ್ಥಾನಗಳಲ್ಲಿ ಬಿಜೆಪಿ ವಿಜಯಿಯಾಗಿದ್ದು, ಈ ಜಯ ಇಲ್ಲಿನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕುತ್ತು ತಂದಿದೆ. 

ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ 1 ಸ್ಥಾನ ಗೆಲ್ಲುವಲ್ಲಿ ಮಾತ್ರವೇ ಸಫಲವಾಗಿದ್ದು, ಸೋಲಿನ ಹೊಣೆ ಹೊತ್ತ ಬಬ್ಬರ್ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. 

ರಾಜ್ಯದಲ್ಲಿ SP - BSP ಮೈತ್ರಿ ಹಿಂದಿಕ್ಕಿ 63 ಸ್ಥಾನ ವಶಪಡಿಸಿಕೊಂಡಿದ್ದು,  ನುಂಗಲಾರದ ತುತ್ತಾಗಿದೆ. ಎಸ್ ಪಿ 5 ಸ್ಥಾನ ಪಡೆದಿದ್ದರೆ, ಬಿಎಸ್ ಪಿ 9 ಸ್ಥಾನಗಳಲ್ಲಿ ಜಯಗಳಿಸಿದೆ. 

ಇಲ್ಲಿ ಮೈತ್ರಿ ಹಿಂದಿಕ್ಕುವಲ್ಲಿ ಮಾತ್ರವೇ ಮೋದಿ ಅಲೆ ಕೆಲಸ ಮಾಡದೇ ಕಾಂಗ್ರೆಸ್ ನೆಲಕಚ್ಚುವಂತೆಯೂ ಮಾಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ  73 ಸ್ಥಾನ ಗಳಿಸಿದ್ದು, ಕಾಂಗ್ರೆಸ್ 2 ರಲ್ಲಿ ವಿಜಯಯಿಯಾಗಿತ್ತು. 

ಸ್ಥಾನ ಕಳೆದುಕೊಳ್ಳಲಿದ್ದಾರಾ ದಿನೇಶ್ ಗುಂಡೂರಾವ್ ?