ಉತ್ತರ ಪ್ರದೇಶದಲ್ಲಿ 7 ನೇ ಹಂತದ ಚುನಾವಣಾ ಪ್ರಕ್ರಿಯೆ ಮುಗಿದ ಕೆಲವೇ ಗಂಟೆಗಳಲ್ಲಿ ಲಕ್ನೋದ ಜನನಿಬಿಡ ಪ್ರದೇಶದಲ್ಲಿ ಭಯೋತ್ಪಾದಕರಿರುವ ಗುಮಾನಿ ವ್ಯಕ್ತವಾಗಿದೆ.

ನವದೆಹಲಿ (ಮಾ.07): ಉತ್ತರ ಪ್ರದೇಶದಲ್ಲಿ 7 ನೇ ಹಂತದ ಚುನಾವಣಾ ಪ್ರಕ್ರಿಯೆ ಮುಗಿದ ಕೆಲವೇ ಗಂಟೆಗಳಲ್ಲಿ ಲಕ್ನೋದ ಜನನಿಬಿಡ ಪ್ರದೇಶದಲ್ಲಿ ಭಯೋತ್ಪಾದಕರಿರುವ ಗುಮಾನಿ ವ್ಯಕ್ತವಾಗಿದೆ.

ಅನುಮಾನಾಸ್ಪದ ವ್ಯಕ್ತಿ ಪೊಲೀಸರಿಗೆ ಶರಣಾಗಲು ನಿರಾಕರಿಸಿದ್ದು, ಹಾಜಿ ಕಾಲೋನಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಲಕ್ನೋ ಮತ್ತು ಕಾನ್ಪುರದಲ್ಲಿ ಶಂಕಿತರು ಉಳಿದುಕೊಂಡಿರುವ ಬಗ್ಗೆ ನಾವು ಮಾಹಿತಿ ನೀಡಿದ್ದೆವು. ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದಾರೆ. ಕಾನ್ಪುರದಲ್ಲಿ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಡಿಜಿ ದಲ್ಜೀತ್ ಚೌಧರಿ ಹೇಳಿದ್ದಾರೆ.