ಪಣಜಿ(ಜ.30): ತೀವ್ರ ಅನಾರೋಗ್ಯಪೀಡಿತರಾಗಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್, ಇಂದು ವಿಧಾನಸಭೆಯಲ್ಲಿ ಗೋವಾ ರಾಜ್ಯದ ಬಜೆಟ್ ಮಂಡಿಸಿ ಗಮನಸೆಳೆದರು.

ಅಸ್ವಸ್ಥ ಪರಿಸ್ಥಿತಿಯಲ್ಲೇ ವಿಧಾನಸಭೆಗೆ ಆಗಮಿಸಿದ ಪರಿಕ್ಕರ್, ತಲೆಗೆ ಟೋಪಿ, ಮೂಗಿಗೆ ಪೈಪ್ ಹಾಕಿಕೊಂಡು ಬಜೆಟ್ ಮಂಡಿಸಿದರು. ಈ ವೇಳೆ ಪರಿಕ್ಕರ್ ಮಾತಿನ ಮಧ್ಯೆ ಹಲವು ಬಾರಿ ನೀರು ಕೇಳಿದ್ದು, ಸಿಬ್ಬಂದಿ ಅವರಿಗೆ ನೀರು ಕೊಡುತ್ತಾ ಸಹಕರಿಸಿದರು.

ಪರಿಕ್ಕರ್ ಅತ್ಯಂತ ಮೆಲು ಧ್ವನಿಯಲ್ಲಿ ಬಜೆಟ್ ಮಂಡಿಸಿದ್ದು, ವಿಧಾನಸಭೆ ಅತ್ಯಂತ ಗಂಭೀರವಾಗಿ ಪರಿಕ್ಕರ್ ಭಾಷಣವನ್ನು ಆಲಿಸಿತು. ಅನಾರೋಗ್ಯ ಪರಿಸ್ಥಿತಿಯಲ್ಲೂ ಬಜೆಟ್ ಮಂಡನೆ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಿದ ಪರಿಕ್ಕರ್ ಅವರಿಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.