ಚಾಕಲೇಟ್ನಲ್ಲಿ ಹುಳಗಳು ಸಿಗುವುದು  ಸಾಮಾನ್ಯವಾಗಿದೆ. ಅಂತಹ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಆದರೆ ಇದೀಗ  ಆಪ್ಪಿ ಜ್ಯೂಸ್ ಪಾಕೇಟ್'ನಲ್ಲಿ ಕಸ ಕಡ್ಡಿ ಸಿಕ್ಕಿರುವ ಘಟನೆ  ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.

ಬೆಂಗಳೂರು(ಜು.06): ಚಾಕಲೇಟ್ನಲ್ಲಿ ಹುಳಗಳು ಸಿಗುವುದು ಸಾಮಾನ್ಯವಾಗಿದೆ. ಅಂತಹ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಆದರೆ ಇದೀಗ ಆಪ್ಪಿ ಜ್ಯೂಸ್ ಪಾಕೇಟ್'ನಲ್ಲಿ ಕಸ ಕಡ್ಡಿ ಸಿಕ್ಕಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.

ಅಯ್ಯಪ್ಪನಗರದ ದುರ್ಗಾ ಬೇಕರಿಯಲ್ಲಿ ಗ್ರಾಹಕರೊಬ್ಬರು ಜ್ಯೂಸ್ ಕುಡಿಯುತ್ತಿದ್ದಾಗ ಕಸ, ಕಡ್ಡಿ ಸಿಕ್ಕಿದೆ. ಅನುಮಾನಗೊಂಡು ಪಾಕೇಟ್ ನ್ನು ಕತ್ತರಿಸಿ ಸ್ಟೀಲ್ ಬಾಕ್ಸ್ ನಲ್ಲಿ ಸುರಿದಾಗ ಕಸ ಇರುವುದು ಪತ್ತೆಯಾಗಿದೆ. ಗಾಬರಿಗೊಂಡ ಗ್ರಾಹಕರು ಬೇಕರಿ ಮಾಲೀಕರನ್ನು ವಿಚಾರಿಸಿದರೆ ಅವರು ನಮಗೇನು ಗೊತ್ತಿಲ್ಲ ಅಂತಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಗ್ರಾಹಕರು ಇನ್ಮುಂದೆ ಜ್ಯೂಸ್ ಕುಡಿಯುವಾಗ ಎಚ್ಚರವಹಿಸೋದು ಅಗತ್ಯ.