RSS ರುದ್ರೇಶ್ ಹಂತಕರು ಹಿಂದೂಪರ ಮುಖಂಡರು, ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.

ಬೆಂಗಳೂರು(ಅ.30): RSS ರುದ್ರೇಶ್ ಹಂತಕರು ಪೊಲೀಸರ ವಿಚಾರಣೆ ಸಮಯದಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಹತ್ಯೆಗೆ ಎರಡು ಬಾರಿ ಯತ್ನ ನಡೆಸಲಾಗಿತ್ತು ಎಂದು ಸತ್ಯ ಬಾಯ್ಬಿಟ್ಟಿದ್ದಾರೆ. 

RSS ರುದ್ರೇಶ್ ಹಂತಕರು ಹಿಂದೂಪರ ಮುಖಂಡರು, ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ. ಸೆ.16ರಂದು ಶಿವಾಜಿನಗರದಲ್ಲಿ ರುದ್ರೇಶ್​ರನ್ನು ಕೊಂದಿದ್ದ ಹಂತಕರು ವಿರಚಾರಣೆ ಸಮಯದಲ್ಲಿ ಅನೇಕ ಮಾಹಿತಿಯನ್ನು ಹೊರ ಹಾಕುತ್ತಿದ್ದು, ನಮ್ಮ ಮೊದಲ ಟಾರ್ಗೆಟ್ ಆಗಿದ್ದವರು ಪ್ರತಾಪ್ ಸಿಂಹ ಎಂದಿದ್ದಾರೆ. 

ಬಿಜೆಪಿ ಸಂಸದ ಪ್ರತಾಪ್ ಸಿಂಹ ಹತ್ಯೆಗೆ ಸಂಚು ರೂಪಿಸಿದ್ದ RSS ರುದ್ರೇಶ್ ಹಂತಕರು, ಎರಡು ಬಾರಿ ಕೊಲೆಗೆ ಯತ್ನಿಸಿ, ವಿಫಲರಾಗಿದ್ದಾಗಿ ತನಿಖಾಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾರೆ. ಬಂಧಿತರ ಬಳಿ ಪ್ರತಾಪ್ ಸಿಂಹರ ಇತ್ತೀಚಿನ ಕಾರ್ಯಕ್ರಮಗಳ ಪಟ್ಟಿ ಇತ್ತು ಎನ್ನಲಾಗಿದೆ. ಇದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.