ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತವನ್ನು ಪಡೆಯುವುದೇ ಭಾರತೀಯ ಜನತಾ ಪಕ್ಷದ ಗುರಿ ಎಂದು ಬಿಸ್'ವೈ ಹಾಗೂ ಪಿ.ಮುರುಳೀಧರ್ ರಾವ್ ಹೇಳಿದ್ದಾರೆ. 

ಬೆಂಗಳೂರು (ಏ.30): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತವನ್ನು ಪಡೆಯುವುದೇ ಭಾರತೀಯ ಜನತಾ ಪಕ್ಷದ ಗುರಿ ಎಂದು ಬಿಸ್'ವೈ ಹಾಗೂ ಪಿ.ಮುರುಳೀಧರ್ ರಾವ್ ಹೇಳಿದ್ದಾರೆ. 

ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿರುವ ಹಿನ್ನಲೆಯಲ್ಲಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ಉಸ್ತುವಾರಿ ಸಚಿವರಾಗಿರುವ ಪಿ.ಮುರುಳೀಧರ್ ರಾವ್ ರನ್ನು ಕಳುಹಿಸಿದ್ದಾರೆ.

ಪ್ರಸ್ತುತ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ.ಪರಿಸ್ಥಿತಿಯನ್ನು ಅವಲೋಕಿಸಿ ವರದಿ ನೀಡುವಂತೆ ರಾಜ್ಯ ುಸ್ತುವಾರಿ ಸಚಿವರಾಗಿರುವ ಮುರುಳೀಧರ್ ರವರನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಕಳುಹಿಸಿದ್ದಾರೆ. ನಾವು 'ಮಿಷನ್ 150' ಗುರಿಯನ್ನು ಹೊಂದಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ಸೇವ್ ಬಿಜೆಪಿ ಸಮ್ಮೇಳನ ನಡೆಯಲಿದೆ. ಪಕ್ಷದ 24 ಮುಖಂಡರು ಭಾಗವಹಿಸಲಿದ್ದಾರೆ.