ರಾಯ್ಪುರ[ಸೆ.22]: ಆತ ಪ್ರತಿದಿನವೂ ವ್ಯಾನಿನಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ. ಕಂತೆಗಟ್ಟಲೆ ಹಣ ಕಣ್ಣಿಗೆ ಕಂಡರೂ ಕೈಗೆ ಬಿಡಿಗಾಸು ಸಿಗುತ್ತಿರಲಿಲ್ಲ. ನಾಲ್ಕು ತಿಂಗಳಿನಿಂದ ಸಂಬಳ ನೀಡದೇ ಇದ್ದಿದ್ದರಿಂದ ಸಿಟ್ಟಾಗಿದ್ದ ಆತ ಹಣ ತುಂಬಿದ್ದ ವ್ಯಾನ್‌ ಅನ್ನೇ ಮನೆಗೆ ಒಯ್ದಿದ್ದಾನೆ. ಇಂಥದ್ದೊಂದು ವಿಚಿತ್ರ ಘಟನೆ ರಾಯ್ಪುರದಲ್ಲಿ ನಡೆದಿದೆ.

ಎಟಿಎಂಗೆ ಹಣ ಹಾಕುವ ಸಿಸ್‌ ಸಿಸ್ಕೋ ಸಂಸ್ಥೆಯ ವಾಹನ ಚಾಲಕನಾದ ಪೀತಾಂಬರ್‌ ದೇವಾಂಗನ್‌ ಎಂಬಾತ ಹಣದ ವ್ಯಾನ್‌ ಅಪಹರಿಸಿ, ಬಾಕಿ ಇರುವ ವೇತನ ಪಾವತಿಸಿದರೆ ವ್ಯಾನಿನ ಸಮೇತ ವಾಪಸ್‌ ಬರುವುದಾಗಿ ಬೆದರಿಕೆ ಹಾಕಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದ.

ಆದರೆ, ಜಿಪಿಎಸ್‌ ಅಳವಡಿಸಿದ್ದ ವ್ಯಾನ್‌ ಅನ್ನು ಸುಲಭವಾಗಿ ಪತ್ತೆ ಹಚ್ಚಿದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.