ಪ್ರಧಾನಿ ನರೆಂದ್ರ ಮೋದಿ ಉಡುಗೆ-ತೊಡುಗೆ, ಮೇಕಪ್‌ನಲ್ಲಿ ಬಹಳ ಅಚ್ಚುಕಟ್ಟು | ಫೋಟೋಗಳಿಗೆ ಪೋಸ್ ಕೊಡುವುದರಲ್ಲೂ ಎತ್ತಿದ ಕೈ | ಮೇಕಪ್‌ಗಾಗಿ ಪ್ರತಿ ತಿಂಗಳು ಮಾಡುವ ಖರ್ಚೆಷ್ಟು ಗೊತ್ತಾ? 

ನವದೆಹಲಿ (ಅ. 27): ಪ್ರಧಾನಿ ನರೇಂದ್ರ ಮೋದಿ ಅವರು ಮೇಕಪ್ ಕಲಾವಿದರೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಮೇಕಪ್‌ಗಾಗಿಯೇ ಪ್ರತಿ ತಿಂಗಳು ಮೋದಿ 15 ಲಕ್ಷರು. ವ್ಯಯ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದಿತ್ಯ ಚತುರ್ವೇದಿ ಎನ್ನುವವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಈ ಪೋಸ್ಟ್ ಅನ್ನು 15 ಸಾವಿರ ಜನರು ಶೇರ್ ಮಾಡಿದ್ದು, 700 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಅವರು ಮೇಕಪ್‌ಗೆ ಖರ್ಚು ಮಾಡುತ್ತಿರುವ ವಿಷಯ ಸಾಮಾಜಿಕ ಜಾಲತಾಣಗಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಮಹಿಳೆಯೊಬ್ಬಳು ಮೋದಿ ಅವರಿಗೆ ಮೇಕಪ್ ಮಾಡುವುದನ್ನು ನೋಡಬಹುದಾಗಿದೆ. ಮೋದಿ ಅವರು ಈ ಹಿಂದೆ ಅಮೆರಿಕ ಅಧ್ಯಕ್ಷರ ಭೇಟಿ ವೇಳೆ 10 ಲಕ್ಷದ ಸೂಟು ಧರಿಸಿದ್ದರು ಎಂದು ಸುದ್ದಿಯಾಗಿತ್ತು. ಹೀಗಾಗಿ ಮೋದಿ ಅವರು ಕಾರ್ಯಕ್ರಮದ ವೇಳೆ ವಿವಿಧ ರೀತಿಯ ವೇಷಭೂಷಣ ಧರಿಸಿರುವ ಫೋಟೊಗಳನ್ನು ಹಾಕಿ ಟೀಕಾಕಾರರು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ 2016 ರಲ್ಲಿ ತೆಗೆದಿದ್ದಾಗಿದೆ.

ಮೇಡಮ್ ತುಸಾಡ್ಸ್ ಮೇಣದ ಪುತ್ಥಳಿ ನಿರ್ಮಿಸಲು ಬಂದ ತಂಡವೊಂದು ಮೋದಿ ಅವರ ಅಳತೆ ತೆಗೆದುಕೊಂಡಿತ್ತು. ಈ ವೇಳೆ ಮಹಿಳೆಯೊಬ್ಬಳು ಮೋದಿ ಅವರ ಕಣ್ಣಿನ ಅಳತೆ ತೆಗೆದುಕೊಂಡಿದ್ದರು. ಆದರೆ, ಫೋಟೋದ ಹಿನ್ನೆಲೆಯನ್ನು ತಿಳಿಸದೇ ಮೋದಿ ಅವರು ಮೇಕಪ್ ಕಲಾವಿದೆಗೆ ಪ್ರತಿ ತಿಂಗಳು 15 ಲಕ್ಷ ರು. ನೀಡುತ್ತಿದ್ದಾರೆ ಎಂಬ ಸುಳ್ಳುಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗಿದೆ.