‘ರೀಮೋಟ್ ಸಿಎಂ ಸಾಲ ಮನ್ನಾ ಎಲ್ಲಾಗಿದೆ?’

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Mar 2019, 10:54 PM IST
Union Minister Smriti Irani Slams Karnataka CM HD Kumaraswamy
Highlights

ಸಿಎಂ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹರಿ ಹಾಯ್ದಿದ್ದಾರೆ.

ಗದಗ[ಮಾ. 07]  ರಾಜ್ಯದ ಇಂದಿನ ಸ್ಥಿತಿ ಕೇಂದ್ರದಲ್ಲಿ ಈ ಹಿಂದೆ ಇದ್ದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಸ್ಥಿತಿಯಾಗಿದೆ. ಒಂದೆಡೆ ರಿಮೋಟ್ ಕಂಟ್ರೋಲ್ ನಿಂದ ನಡೆಯೋ ಸಿಎಂ ಮತ್ತೊಂದೆಡೆ ರಿಮೋಟ್ ಯಾವಾಗ ಚಾಲನೆಯಾಗುತ್ತೋ ಯಾವಾಗ ಬಂದ್ ಆಗುತ್ತೋ ಅಂತ ಗೊತ್ತಿಲ್ಲದ ವ್ಯಕ್ತಿಗಳಿಂದ ಕರ್ನಾಟಕ ಕತ್ತಲೆಯತ್ತ ದೂಡಲ್ಪಟ್ಟಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗೆ ಕುಂಕುಮಧಾರಿಗಳಿಂದ ಭಯ ಆಗುತ್ತಂತೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಚಿವೆ, ಇವರಿಬ್ಬರೂ  ಸೇರಿ ಕರ್ನಾಟಕವನ್ನು ದುರ್ದೆಸೆಗೆ ತೆಗೆದುಕೊಂಡು ಹೋಗಿದ್ದಾರೆ. ಮೋದಿಯವರು ರಾಜ್ಯದ 17 ಲಕ್ಷ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ಹಣ ಹಾಕುತ್ತಿದ್ದಾರೆ.  ರಾಜ್ಯ ಸರ್ಕಾರ ರೈತರಿಗೆ ಒಂದು ರೂಪಾಯಿ ಸಹ ಕೊಡೋ ಅವಶ್ಯಕತೆಯಿಲ್ಲ ಎಂದರು.

HDK-ರಮೇಶ್-ನಾಗೇಂದ್ರ ಭೇಟಿ.. ಅಸಮಾಧಾನ ಹೊಗೆಯಾಡ್ತಿದೆ!

ಕಿಸಾನ್ ಸಮ್ಮಾನ್ ಯೋಜನೆಯನ್ನು ರೈತರಿಗೆ ಏಕೆ ತಲುಪಿಸೋಕೆ ಇಷ್ಟ ಇಲ್ಲ ಅಂತ ಇಬ್ಬರೂ ಹೇಳಲಿ.  ರೈತರ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಒಬ್ರು ರಿಮೋಟ್ ನಿಂದ ಚಾಲಿಸೋ ಸಿಎಂ ಮತ್ತೊಬ್ಬರು ಕುಂಕುಮ ಕಂಡ್ರೆ ಭಯ ಪಡೋರು ಇವರಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.

ರಿಮೋಟ್ ಸಿಎಂ ಹಾಗೂ ಕಾಂಗ್ರೆಸ್ ರಾಜ್ಯದ ಎಲ್ಲಾ ರೈತರ ಸಾಲಮನ್ನಾ ಮಾಡ್ತೀನಿ ಅಂದಿದ್ರು. ಆದ್ರೆ ಸಾಲ ಮನ್ನಾ ಆಗಿದೆಯಾ? ಎಲ್ಲಿವರೆಗೂ ಈ ಸುಳ್ಳು ಭರವಸೆ ನಡೆಯುತ್ತೆ. ಇದಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ನೀವೆಲ್ಲಾ ಪಣ ತೊಡಬೇಕಿದೆ. ಇವರಿಗೆ ರೈತರ ಚಿಂತೆಯಿಲ್ಲ, ಒಬ್ರಿಗೆ ಅವರ ಹಾಗೂ ಕುಟುಂಬದ ಚಿಂತೆಯಾದರೆ  ಸಿದ್ದರಾಮಯ್ಯರಿಗೆ ಕುಂಕುಮ ಕಂಡ್ರೆ ಭಯ. ಇಂಥ ವಿಚಾರದಲ್ಲೇ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

loader