ನವದೆಹಲಿ [ಜೂ.27] : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಪ್ರಧಾನಿ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.

ಜು.5ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಕೆಲವೇ ದಿನಗಳು ಬಾಕಿ ಇರುವಂತೆ  ಸಿಂಗ್ ಅವರ ದಿಲ್ಲಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

1991ರಲ್ಲಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಈ ವೇಳೆ ಆರ್ಥಿಕ ಸುಧಾರಣೆಯನ್ನೇ ಮಾಡಿದ್ದು, ಈ  ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಮಂಡನೆಗೂ ಮುನ್ನ ಸಿಂಗ್ ಭೇಟಿ ಮಾಡಿದ್ದಾರೆ. 

ಇದೊಂದು ಕರ್ಟಸಿ ಮೀಟಿಂಗ್ ಆಗಿದ್ದು, ಇಬ್ಬರ ಮೊದಲ ಭೇಟಿಯಾಗಿದೆ.  ಕಳೆದ 30 ವರ್ಷಗಳಿಂದ ಪ್ರತೀ ಬಜೆಟ್ ಅಧಿವೇಶನದಲ್ಲಿಯೂ ಇರುತ್ತಿದ್ದ ಮನಮೋಹನ್ ಸಿಂಗ್ ಅವರ ರಾಜ್ಯ ಸಭಾ ಸದಸ್ಯ ಅವಧಿ ಮುಕ್ತಾಯವಾಗಿದ್ದು, ಈ ಬಾರಿ ಅಧಿವೇಶನದಿಂದ ದೂರ ಉಳಿದಿದ್ದಾರೆ. 

ಇನ್ನು ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಾವಧಿಯ ಹಣಕಾಸು ಸಚಿವೆಯಾಗಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಹಣಕಾಸು ಸಚಿವ ಸ್ಥಾನ ನಿರ್ವಹಿಸಿದ್ದರು.