ಪರಿಚ್ಛೇದ 35ಎ ಕುರಿತಂತೆ ಕೂಗು ಕೇಳಿಬರುತ್ತಿದೆ. ಭಾರತದ ಬಗ್ಗೆ ಉಲ್ಲೇಖಿಸುವುದು ಅಸಾಧ್ಯವಾಗುವಂತಹ ಸಮಯ ಬರಬಹುದು’ 1947 ರಂತೆ 2047ರಲ್ಲಿಯೂ ಭಾರತ ವಿಭಜನೆಯಾಗಬಹುದು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. 

ನವದೆಹಲಿ: 2047 ರಲ್ಲಿ ಭಾರತ ಮತ್ತೊಮ್ಮೆ ವಿಭಜನೆಯಾಗಬಹುದು ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ. ‘ಧರ್ಮದ ಆಧಾರದಲ್ಲಿ 1947 ರಲ್ಲಿ ಭಾರತ ವಿಭಜನೆಯಾಗಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇ ಪರಿಸ್ಥಿತಿ 2047 ರಲ್ಲಿ ಸಂಭವಿಸಲಿದೆ. 72 ವರ್ಷಗಳಲ್ಲಿ 33 ಕೋಟಿಯಷ್ಟಿದ್ದ ಜನಸಂಖ್ಯೆ, 135.7 ಕೋಟಿಗೆ ಏರಿಕೆಯಾಗಿದೆ. ವಿಭಜಕ ಶಕ್ತಿಗಳ ಜನಸಂಖ್ಯಾ ಸ್ಫೋಟ ಭಯಾನಕವಾಗಿದೆ. 

ಪ್ರಸ್ತುತ ಪರಿಚ್ಛೇದ 35ಎ ಕುರಿತಂತೆ ಕೂಗು ಕೇಳಿಬರುತ್ತಿದೆ. ಭಾರತದ ಬಗ್ಗೆ ಉಲ್ಲೇಖಿಸುವುದು ಅಸಾಧ್ಯವಾಗುವಂತಹ ಸಮಯ ಬರಬಹುದು’ ಎಂದು ಸಚಿವ ಸಿಂಗ್ ಟ್ವೀಟ್ ಮಾಡಿದ್ದಾರೆ.

Scroll to load tweet…