ನವದೆಹಲಿ[ಜ.13] ದೆಹಲಿಯಲ್ಲಿ ನಡೆಯುತ್ತಿದ್ದ ಬಿಜೆಪಿ ಶಾಸಕರು ಮತ್ತು ಸಂಸದರ ಸಭೆಯ ವೇಳೆ ವೇದಿಕೆ ಏರಲು ಮುಂದಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕೆಳಕ್ಕೆ ಇಳಿದಿದ್ದಾರೆ.

ಕೇಂದ್ರ ಸಚಿವರಿಗೆ ವೇದಿಕೆಯಿಂದ ಕೆಳಗೆ ಇಳಿಯಲು ಬಿಎಸ್‌ವೈ ಸೂಚನೆ ನೀಡಿದ್ದಾರೆ ಎಂಬ ಮಾತು ಒಮ್ಮೆ ಕೇಳಿಬಂದಿತ್ತು.  ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಹಿರಿಯ ನಾಯಕರಿಗೆ ಆಸನ ವ್ಯವಸ್ಥೆ ಕಲ್ಪಿಸಲು ಹೆಗಡೆ ಕೆಳಕ್ಕೆ ಇಳಿದಿದ್ದಾರೆ. 

ಆಪರೇಷನ್ ಸಂಕ್ರಾಂತಿಗೆ ಉತ್ಸಾಹ ತೋರದ ಯಡಿಯೂರಪ್ಪ?

ಪ್ರಹ್ಲಾದ್ ಜೋಶಿ ರಾಜ್ಯ ಬಿಜೆಪಿಯನ್ನು ಅಧ್ಯಕ್ಷರಾಗಿ ಮುಂದೆ ನಡೆಸಿದ್ದವರು. ಹಾಗಾಗಿ ಈ ಕಾರಣಕ್ಕೆ ಹೆಗಡೆ ಅವರಿಗೆ ಆಸನ ಬಿಟ್ಟುಕೊಟ್ಟಿದ್ದಾರೆ  ವೇದಿಕೆಯಿಂದ ಕೆಳಗಿಳಿದು 2ನೇ ಸಾಲಿನಲ್ಲಿ  ಕುಳಿತ ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಸಭೆಯಲ್ಲಿನ ಚರ್ಚೆಯಲ್ಲಿ ಪಾಲ್ಗೊಂಡರು.