ದೇಶದ ರೈತರಿಗೆ ಭಾರೀ ಗುಡ್ ನ್ಯೂಸ್ : ಭರ್ಜರಿ ಬೆಂಬಲ ಬೆಲೆ ಘೋಷಿಸಿದ ಕೇಂದ್ರ

union Govt hikes Price : Good News For Farmers
Highlights

ರೈತರ ಕೃಷಿ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ನೀಡುವ ತನ್ನ ಬಜೆಟ್‌ ವಾಗ್ದಾನವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ.   ಭರ್ಜರಿ ಪ್ರಮಾಣದಲ್ಲಿ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದೆ. 

ನವದೆಹಲಿ: ರೈತರ ಕೃಷಿ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ನೀಡುವ ತನ್ನ ಬಜೆಟ್‌ ವಾಗ್ದಾನವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ.   ಭರ್ಜರಿ ಪ್ರಮಾಣದಲ್ಲಿ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದೆ. 

ಆರ್ಥಿಕ ವ್ಯವಹಾರಗಳ ಕುರಿತ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯುವ 14 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. 

ಪ್ರಧಾನಿ ಮೋದಿ ಸರ್ಕಾರದವು ಇತಿಹಾಸದಲ್ಲೇ ಅತೋ ದೊಡ್ಡ ಪ್ರಮಾಣದಲ್ಲಿ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಈ ಮೂಲಕ ರಾಜ್ಯ ಸರ್ಕಾರದಲ್ಲಿ ಸಾಲ ಮನ್ನಾ ಮಾಡುವ ಮುನ್ನವೇ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 

ಕೇಂದ್ರದ ನಿರ್ಧಾರದಿಂದ 15 ಸಾವಿರ ಕೋಟಿ ರೂ. ಹೊರೆಯಾಗಲಿದ್ದು, ಇದರಿಂದ ದೇಶದ 12 ಕೋಟಿ ರೈತರಿಗೆ ಲಾಭವಾಗಲಿದೆ.  ದೇಶದ ರಾಗಿ ಬೆಳೆಗಾರರಿಗೆ ಬಂಪರ್ ಆಫರ್ ನೀಡಿದ್ದು, ಪ್ರತಿ ಕ್ವಿಂಟಲ್ ರಾಗಿಗೆ 2,897 ರೂ. ಪಡೆಯಲಿದ್ದಾರೆ. ಶೇ.50ರಷ್ಟು ಹೆಚ್ಚುವರಿಯಾಗಿ ಬೆಂಬಲ ಬೆಲೆಯನ್ನು ಘೋಷಣೆ ಮಾಡಲಾಗಿದೆ.  

ಪ್ರತಿ ಕ್ವಿಂಟಾಲ್ ಹೈಬ್ರೀಡ್ ಜೋಳಕ್ಕೆ 2, 430 ರೂ. ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು, ಶೇ.40ರಷ್ಟು ಹೆಚ್ಚುವರಿಯಾಗಿ ಬೆಂಬಲ ಬೆಲೆ ಘೋಷಣೆಯಾಗಿದೆ.  ಪ್ರತಿ ಕ್ವಿಂಟಲ್ ಸೂರ್ಯಕಾಂತಿ ಬೀಜಕ್ಕೆ 5, 388 ರೂ. ಬೆಂಬಲ ಬೆಲೆ ಘೋಷಿಸಿದ್ದು, ಶೇ. 31ರಷ್ಟು ಹೆಚ್ಚಿಸಿದಂತಾಗಿದೆ. ಹತ್ತಿಗೆ ಶೇ.28ರಷ್ಟುಹೆಚ್ಚಳ ಮಾಡಲಾಗಿದೆ. ಪ್ರತೀ ಕ್ವಿಂಟಾಲ್ ಎಳ್ಳಿಗೆ ಶೇ.18ರಷ್ಟು ಏರಿಕೆ ಮಾಡಲಾಗಿದೆ. ಭತ್ತಕ್ಕೆ 200 ರು. ಹೆಚ್ಚಳ ಮಾಡಲಾಗಿದೆ. 

loader