2 ಹಂತಗಳಲ್ಲಿ ಬಜೆಟ್ ಅಧಿವೇಶನ ಮೊದಲ ದಿನ ರಾಷ್ಟ್ರಪತಿ ಭಾಷಣ

ನವದೆಹಲಿ: 2018ರ ಸಾಲಿನ ಕೇಂದ್ರ ಬಜೆಟನ್ನು ಫೆ.1ಕ್ಕೆ ಮಂಡಿಸಲಾಗುವುದೆಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

ಬಜೆಟ್ ಅಧಿವೇಶನ ಜ.29ಕ್ಕೆ ಆರಂಭವಾಗಲಿದ್ದು, ಏ.6ರವರೆಗೆ ನಡೆಯಲಿರುವುದೆಂದು ಅವರು ಹೇಳಿದ್ದಾರೆ.

ಮೊದಲ ಹಂತದ ಬಜೆಟ್ ಅಧಿವೇಶನವು ಜ.29ರಿಂದ ಫೆ.9ರವರೆಗೆ ನಡೆಯಲಿದ್ದು, 2ನೇ ಹಂತದ ಅಧಿವೇಶನ ಮಾ.5ರಿಂದ ಏ.6ರವರೆಗೆ ನಡೆಯಲಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.

2018-19 ಹಣಕಾಸು ವರ್ಷದ ಬಜೆಟನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಲಿದ್ದಾರೆ.

ಮೊದಲ ದಿನ ರಾಷ್ಟ್ರಪತಿ ರಾಮ್’ನಾಥ್ ಕೋವಿಂದ್ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಆರ್ಥಿಕ ಸಮೀಕ್ಷೆಯನ್ನು ಕೂಡಾ ಮಂಡಿಸಲಾಗುವುದು.

ಜಿಎಸ್ಟಿ ಯುಗ ಆರಂಭವಾದ ಬಳಿಕ ದು ಮೊದಲ ಬಜೆಟ್ ಆಗಿರುವುದರಿಂದ ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.