ಮೂರೂವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಹಾಲಿ ಕೇಂದ್ರ ಸರ್ಕಾರದ ಪೂರ್ಣ ಪ್ರಮಾಣದ ಕೊನೆಯ ಹಣಕಾಸು ಬಜೆಟ್ ಗುರುವಾರ ಬೆಳಗ್ಗೆ 11ಕ್ಕೆ ಮಂಡನೆಯಾಗಲಿದೆ.

ನವದೆಹಲಿ: ಮೂರೂವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಹಾಲಿ ಕೇಂದ್ರ ಸರ್ಕಾರದ ಪೂರ್ಣ ಪ್ರಮಾಣದ ಕೊನೆಯ ಹಣಕಾಸು ಬಜೆಟ್ ಗುರುವಾರ ಬೆಳಗ್ಗೆ 11ಕ್ಕೆ ಮಂಡನೆಯಾಗಲಿದೆ.

ಮುಂದಿನ ವರ್ಷ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮುಂಗಡಪತ್ರದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹಲವಾರು ಜನಪ್ರಿಯ ಘೋಷಣೆಗಳನ್ನು ಮಾಡಿ, ಮತದಾರರ ಮನಗೆಲ್ಲಲು ಕಸರತ್ತು ನಡೆಸಬಹುದು ಎಂಬ ನಿರೀಕ್ಷೆಗಳು ಇವೆ.

ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಅನುಷ್ಠಾನಕ್ಕೆ ಬಂದ ಮಂಡನೆಯಾಗುತ್ತಿರುವ ಮೊದಲ ಆಯವ್ಯಯ ಇದಾಗಿದೆ. ಮತದಾರರನ್ನು ಓಲೈಸುವ ಜತೆಯಲ್ಲೇ ವಿತ್ತೀಯ ಕೊರತೆಯನ್ನು ತಗ್ಗಿಸಿ ಆರ್ಥಿಕ ಶಿಸ್ತು ಕಾಪಾಡುವಂತಹ ಗುರುತರ ಹೊಣೆಗಾರಿಕೆಯೂ ಜೇಟ್ಲಿ ಅವರ ಮೇಲಿದೆ. ಇದೊಂದು ರೀತಿ ‘ತಂತಿ ಮೇಲಿನ ನಡಿಗೆ’ಯಾಗಿದ್ದು, ಅದನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

1ತೆರಿಗೆ ವಿನಾಯಿತಿ ಪಡೆಯಲು 80ಸಿ ಅಡಿ ಹೂಡಿಕೆಗೆ ಹಾಲಿ 1.5 ಲಕ್ಷ ಇರುವ ಮಿತಿ 2 ಲಕ್ಷಕ್ಕೇರಿಸುವ ನಿರೀಕ್ಷೆ

2 ಹಾಲಿ 2.5 ಲಕ್ಷ ರು. ವಾರ್ಷಿಕ ಆದಾಯ ಇರುವವರಿಗೆ ತೆರಿಗೆ ವಿನಾಯ್ತಿ ಇದೆ. ಇದು 3 ಲಕ್ಷಕ್ಕೇರಿಕೆ ಸಾಧ್ಯತೆ

3 ವೇತನದಾರರ ಮೇಲಿನ ತೆರಿಗೆ ಹೊರೆಯನ್ನು ತಗ್ಗಿಸಲು ‘ಸ್ಟಾಂಡರ್ಡ್ ಡಿಡಕ್ಷನ್’ ವ್ಯವಸ್ಥೆ ಮರುಜಾರಿ ಸಂಭವ

4 ಆದಾಯ ತೆರಿಗೆ ಸ್ಲ್ಯಾಬ್ 5-10 ಲಕ್ಷ, 10-20 ಲಕ್ಷ ಹಾಗೂ 20 ಲಕ್ಷ ಮೇಲ್ಪಟ್ಟ ಎಂಬುದಾಗಿ ಏರಿಕೆ ಸಾಧ್ಯತೆ

4 ಕೃಷಿ, ಗ್ರಾಮೀಣ, ಉದ್ಯೋಗ ಖಾತ್ರಿ ಹಾಗೂ ನೀರಾವರಿ ಯೋಜನೆಗಳಿಗೆ ಭಾರಿ ಅನುದಾನ ಮೀಸಲು ಸಂಭವ