ಸೇನೆಗೆ ನೇಮಕವಾಗದ ಹಿನ್ನೆಲೆ ಫೇಸ್‌ಬುಕ್ ಲೈವ್‌ನಲ್ಲೇ ಸೂಸೈಡ್

First Published 12, Jul 2018, 1:54 PM IST
Unable to join Army Agra youth commits suicide
Highlights

ಸೇನೆಗೆ ನೇಮಕಗೊಳ್ಳದ ಹಿನ್ನೆಲೆಯಲ್ಲಿ ಯುವನೋರ್ವ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಫೇಸ್ ಬುಕ್ ನಲ್ಲಿ ಲೈವ್  ಮಾಡುವಾಗಲೇ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ. 

ಲಖ್ನೋ : ಉತ್ತರ ಪ್ರದೇಶದ ಆಗ್ರಾದಲ್ಲಿ ಯುವಕನೋರ್ವ ಸಾಮಾಜಿಕ ಜಾಲ ತಾಣದಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಸೇನೆಗೆ ಸೇರಲು ಅರ್ಹರಾಗದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫೇಸ್ ಬುಕ್ ನಲ್ಲಿ ಲೈವ್ ಮೂಲಕ ಮುನ್ನಾ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ವಯಸ್ಸಿನ ಕಾರಣದಿಂದ ಈತನನ್ನು ಸೇನಾ ನೇಮಕಾತಿಯಿಂದ ಕೈ ಬಿಡಲಾಗಿತ್ತು ಈ ನಿಟ್ಟಿನಲ್ಲಿ ನೊಂದು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

 

loader