ರಾಜೀನಾಮೆ ಗುಟ್ಟು ರಟ್ಟು ಮಾಡಿದ ಉಮೇಶ್ ಜಾಧವ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೆಕ್ಕೆಗೆ ಸೇರಿರುವ ಉಮೇಶ್ ಜಾಧವ್ ರಾಜೀನಾಮೆ ಕಾರಣ ಬಿಚ್ಚಿಟ್ಟಿದ್ದಾರೆ. 

Umesh Jadhav joined BJP likely to be pitted against Kharge in LS polls

ಕಲಬುರಗಿ[ಮಾ. 06] ನನ್ನ ರಾಜೀನಾಮೆ ಅಂಗೀಕಾರವಾಗುತ್ತದೆ. ಸ್ಪೀಕರ್ ರಮೇಶ್ ಕುಮಾರ್ ಮೇಲೆ ನನಗೆ  ನಂಬಿಕೆ ಇದೆ.  ಈ ಬಗ್ಗೆ ಜನರಿಗೆ ಆತಂಕ ಇರಬಹುದು ನನಗೆ ಯಾವುದೇ ಆತಂಕ ಇಲ್ಲ  ಎಂದು ಉಮೇಶ್ ಜಾಧವ್ ಹೇಳಿದ್ದಾರೆ.

ಸ್ಪೀಕರ್ ತಮ್ಮ ಮನೆಯಲ್ಲಿ 45 ನಿಮಿಷ ಟೈಮ್ ಕೊಟ್ಟಿದ್ದರು . ಆದರೆ ಕೈ ನಾಯಕರು 5 ನಿಮಿಷ ಟೈಮ್ ಕೂಡ ಕೊಟ್ಟಿರಲಿಲ್ಲ .ಕೈ ನಾಯಕರು ಟೈಮ್ ಕೊಟ್ಟಿದ್ದರೆ ನಾನು ಕಾಂಗ್ರೆಸ್ ಬಿಡುತ್ತಿರಲಿಲ್ಲ ಎಂದರು.

ಕಮಲ ಹಿಡಿದ ಜಾಧವ್: ಸೋಲಿಲ್ಲದ ಸರದಾರನಿಗೆ ಸವಾಲ್!

ಮಲ್ಲಿಕಾರ್ಜುನ ಖರ್ಗೆ ಸೇರಿ ಯಾರ ವಿರುದ್ಧವೂ ಕಣಕ್ಕಿಳಿಯಲು ಸಿದ್ಧ. ಮೈತ್ರಿ ಸರ್ಕಾರ ಉರುಳಿಸುವ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಮೊದಲಿನಿಂದಲೂ ಏಕಾಂಗಿಯಾಗಿಯೇ ನಿರ್ಣಯ ಕೈಗೊಂಡಿದ್ದೇನೆ. ಮತ್ತೆ ಯಾವ ಶಾಸಕರು ರಾಜೀನಾಮೆ ಕೊಡುತ್ತಾರೋ ಎನ್ನುವುದು ಗೊತ್ತಿಲ್ಲ ಎಂದು ಹೊಸ ಬಾಂಬ್ ಹಾಕಿದರು.

 

Latest Videos
Follow Us:
Download App:
  • android
  • ios