ಭೇಷ್.. ಉಮರ್ ಖಾಲೀದ್ ಪಿಎಚ್‌ಡಿ ವರದಿ ತಿರಸ್ಕಾರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 12:03 PM IST
Umar Khalid says JNU university refusing to accept his PhD thesis over sedition row
Highlights

ದೇಶವಿರೋಧಿ ಘೋಷಣೆ ಕೂಗಿದ್ದ ಆರೋಪದಲ್ಲಿ ಜವಾಹರ ಲಾಲ್ ನೆಹರು ಯುನಿವರ್ಸಿಟಿಯಿಂದ  ಬಹಿಷ್ಕಾರ ಶಿಕ್ಷಗೆ ಗುರಿಯಾಗಿದ್ದ ಉಮರ್ ಖಾಲೀದ್ ಗೆ ಮತ್ತೊಂದು ಸಂಕಟ ಎದುರಾಗಿದೆ.

ನವದೆಹಲಿ[ಜು.24] ಉಗ್ರ ಅಫ್ಜಲ್ ಗುರುನನ್ನು ನೇಣಿಗೇರಿಸಿದ್ದನ್ನು ಖಂಡಿಸಿ 2016, ಫೆಬ್ರವರಿ 9ರಂದು  ಕನ್ನಯ್ಯ ಕುಮಾರ್ ಮತ್ತು ಉಮರ್ ಖಾಲೀದ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆ ಕೂಗಿದ್ದದರು. ಇದಕ್ಕೆ ಸಂಬಂಧಿಸಿ ಸಾಕ್ಷ್ಯಗಳು ಲಭ್ಯವಾದ ನಂತರ ಉಮರ್ ಖಲೀದ್‌ ಗೆ ಕಾಲೇಜಿನಿಂದ ಬಹಿಷ್ಕಾರ ಹಾಕಲಾಗಿತ್ತು.

ಇದೀಗ ಉಮರ್ ಖಾಲೀದ್ ಮುಂದಿಟ್ಟಿದ್ದ ಪಿಎಚ್ಡಿ ವರದಿಯನ್ನು ಕಾಲೇಜು ಸ್ವೀಕರಿಸಲು ನಿರಾಕರಿಸಿದೆ. ದೆಹಲಿ ಹೈಕೋರ್ಟ್ ಆದೇಶದ ಪರಿಪಾಲನೆ ಮಾಡಲಾಗಿದೆ ಎಂದು ಕಾಲೇಜು ಹೇಳಿದೆ. ಸೋಮವಾರ ಅಂದರೆ ಜು.23 ವರದಿ ಸಲ್ಲಿಕೆಗೆ ಅಂತಿಮ ದಿನವಾಗಿತ್ತು. ಆದರೆ ಪ್ರಕರಣದಲ್ಲಿ ಇದ್ದ ಕನ್ನಯ್ಯ ಕುಮಾರ್ ಪಿಎಚ್ ಡಿ ವರದಿಯನ್ನು ಕಾಲೇಜು ಸ್ವೀಕಾರ ಮಾಡಿದೆ.

ಕನ್ನಯ್ಯ ಕುಮಾರ್, ಉಮರ್ ಖಾಲೀದ್ ಗೆ ಶಿಕ್ಷೆ ಫಿಕ್ಸ್

ಆಡಳಿತ ಮಂಡಳಿ ವಿರುದ್ಧ ಮತ್ತೆ ಆರೋಪ ಮಾಡಿರುವ ಉಮರ್ ಖಾಲೀದ್, ನಾಣು ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲು ಏರುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಕಾಲೇಜು ಆಡಳಿತ ಮಂಡಳಿ ನಾವು ನ್ಯಾಯಾಲಯದ ತೀರ್ಮಾನ ಎತ್ತಿ ಹಿಡಿದಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದರೆ ನಾನು ಇನ್ನೊಂದು ಸುತ್ತಿನ ಕಾನೂನು ಹೋರಾಟ ಮಾಡುತ್ತೇನೆ ಎಂಬುದು ಉಮರ್ ಖಾಲಿದ್ ಹೇಳಿಕೆ.

loader