ಕಲಬುರ್ಗಿ ಹಂತಕರ ಶೀಘ್ರ ಬಂಧನಕ್ಕೆ ಪತ್ನಿ ಒತ್ತಾಯ

Umadevi Urges the Government to arrest MM Kalburgi's Murderers
Highlights

ಗೌರಿ ಲಂಕೇಶ ಹಂತಕ‌ನ ಬಂಧನ ಹಿನ್ನೆಲೆ

ಎಂ.ಎಂ.‌ಕಲಬುರ್ಗಿ ಪತ್ನಿ ಉಮಾದೇವಿ ಪ್ರತಿಕ್ರಿಯೆ

ಧಾರವಾಡ ನಿವಾಸದಲ್ಲಿ‌ ಮಾಧ್ಯಮಗಳಿಗೆ ಪ್ರತಿಕ್ರಿಯೆ

ಹೊಸ ಸಕಾರ್ಕಾರದಿಂದ ಶೀಘ್ರ ತನಿಖೆಯ ಭರವಸೆ

ಧಾರವಾಡ[ಜೂ.12]: ಪತ್ರಕರ್ತೆ ಗೌರಿ ಲಂಕೇಶ್ ಹಂತಕನ ಬಂಧನವಾದ ಹಿನ್ನೆಲೆಯಲ್ಲಿ, ಎಂ.ಎಂ. ಕಲಬುರ್ಗಿ ಪತ್ನಿ ಉಮಾದೇವಿ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿರುವ ಕಲಬುರ್ಗಿ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಉಮಾದೇವಿ, ಪ್ರಸಕ್ತ ಸರ್ಕಾರ ಕಲಬುರ್ಗಿ ಹಂತಕರನ್ನು ಪತ್ತೆ ಹಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಹೊಸ ಸರ್ಕಾರ ತಮ್ಮ ಪತಿಯ ಹಂತಕರನ್ನು ಶೀಘ್ರದಲ್ಲೇ ಪತ್ತೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗೌರಿ ಲಂಕೇಶ್ ಹಂತಕರು ಪತ್ತೆಯಾಗಿರುವುದು ಸಂತಸ ತಂದಿದೆ ಎಂದಿರುವ ಉಮಾದೇವಿ, ತಮ್ಮ ಪತಿಯ ಹತ್ಯೆ ನಡೆದಾಗ ಗೃಹಮಂತ್ರಿಯಾಗಿದ್ದ ಡಾ.ಜಿ. ಪರಮೇಶ್ವರ್ ಅವರೇ ಮತ್ತೆ ಗೃಹಮಂತ್ರಿಯಾಗಿರುವುದರಿಂದ ಸಾವಿನ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಕರಣದ ತನಿಖೆಯನ್ನು ಬೇಗ ಇತ್ಯರ್ಥಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ಉಮಾದೇವಿ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.     

loader