ಬಿಎಂಡಬ್ಲ್ಯೂ ಕಾರು ದಾರಿಬದಿಯ ಲ್ಯಾಂಪ್ ಪೋಸ್ಟ್'ಗೆ ಡಿಕ್ಕಿ ಹೊಡೆದಿದೆ. ಇನ್ಸ್'ಟಗ್ರಾಂ ಫಾಲೋಯರ್ಸ್ ನೋಡನೋಡುತ್ತಲೇ ಈ ದುರಂತ ಸಂಭವಿಸಿದೆ. ಬ್ಯೂಟಿ ಕ್ವೀನ್ ಸೋಫಿಯಾ ಮೆಗೆರ್ಕೋ ಸ್ಥಳದಲ್ಲೇ ಸಾವನ್ನಪಿದ್ದಾಳೆ. ಕಾರು ಚಲಾಯಿಸುತ್ತಿದ್ದ ಆಕೆಯ ಸ್ನೇಹಿತೆ ಆಸ್ಪತ್ರೆಗೆ ಸಾಗಿಸುವ ವೇಳೆ ಪ್ರಾಣಬಿಟ್ಟಿದ್ದಾಳೆ.
ಉಕ್ರೇನ್: ಟೀನೇಜ್ ಹುಡುಗಿಯರ ಮೋಜು ಮಸ್ತಿಯು ಸಾವಿಗೆ ಎಡೆ ಮಾಡಿಕೊಟ್ಟ ದುರಂತ ಘಟನೆ ಉಕ್ರೇನ್ ದೇಶದಲ್ಲಿ ಸಂಭವಿಸಿದೆ. ಚಲಿಸುತ್ತಿರುವ ಕಾರಿನಲ್ಲಿ ಕುಡಿದು ಕುಪ್ಪಳಿಸುತ್ತಿದ್ದ ಇಬ್ಬರು ಸುಂದರಿಯರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಬ್ಯೂಟಿ ಕ್ವೀನ್ ಮತ್ತು ಮಾಡೆಲ್ ಸೋಫಿಯಾ ಮೆಗೆರ್ಕೋ ಮತ್ತಾಕೆಯ ಸ್ನೇಹಿತೆ ಇಬ್ಬರೂ ಸಾವನ್ನಪ್ಪುವ ಮುನ್ನ ಸೋಷಿಯಲ್ ನೆಟ್ವರ್ಕ್ ತಾಣ ಇನ್ಸ್'ಟಾಗ್ರಾಮ್'ನಲ್ಲಿ ಲೈವ್ ಕೊಡುತ್ತಿದ್ದರು. ಕಾರನ್ನು ಸ್ಪೀಡಾಗಿ ಚಲಾಯಿಸುತ್ತಿದ್ದುದರ ಜೊತೆ ಬಿಯರ್ ಕುಡಿಯುತ್ತಲೇ ಇನ್ಸ್'ಟಗ್ರಾಮ್'ನಲ್ಲಿ ಇವರಿಬ್ಬರು ಮೋಜು ಮಸ್ತಿ ಮಾತುಗಳು ಲೈವ್ ಆಗಿ ನಡೆಯುತ್ತಿತ್ತು. ಆದರೆ, ಇವರ ಬಿಎಂಡಬ್ಲ್ಯೂ ಕಾರು ದಾರಿಬದಿಯ ಲ್ಯಾಂಪ್ ಪೋಸ್ಟ್'ಗೆ ಡಿಕ್ಕಿ ಹೊಡೆದಿದೆ. ಇನ್ಸ್'ಟಗ್ರಾಂ ಫಾಲೋಯರ್ಸ್ ನೋಡನೋಡುತ್ತಲೇ ಈ ದುರಂತ ಸಂಭವಿಸಿದೆ. ಬ್ಯೂಟಿ ಕ್ವೀನ್ ಸೋಫಿಯಾ ಮೆಗೆರ್ಕೋ ಸ್ಥಳದಲ್ಲೇ ಸಾವನ್ನಪಿದ್ದಾಳೆ. ಕಾರು ಚಲಾಯಿಸುತ್ತಿದ್ದ ಆಕೆಯ ಸ್ನೇಹಿತೆ ಆಸ್ಪತ್ರೆಗೆ ಸಾಗಿಸುವ ವೇಳೆ ಪ್ರಾಣಬಿಟ್ಟಿದ್ದಾಳೆ.
