ಭೂಗತ ಪಾತಕಿ ದಾವೂದ್​ ಇಬ್ರಾಹಿಂಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಡನ್​ನಲ್ಲಿ ದಾವೂದ್ ಗೆ ಸೇರಿದ 6.7 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ.

ನವದೆಹಲಿ(ಸೆ.13): ಭೂಗತ ಪಾತಕಿ ದಾವೂದ್​ ಇಬ್ರಾಹಿಂಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಡನ್​ನಲ್ಲಿ ದಾವೂದ್ ಗೆ ಸೇರಿದ 6.7 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ.

ಭಾರತ ಮತ್ತು ದುಬೈ ಬಳಿಕ ಲಂಡನ್'ನಲ್ಲಿ ದಾವೂದ್ ಆಸ್ತಿ ಜಪ್ತಿ ಮಾಡಲಾಗಿದೆ. 2015ರಲ್ಲಿ ಬ್ರಿಟನ್​ ಸರಕಾರಕ್ಕೆ ಭಾರತ ದಾವೂದ್​ ಆಸ್ತಿಯ ಬ್ರಿಟನ್​ ಸರಕಾರಕ್ಕೆ ದಾವೂದ್​ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಮನವಿ ಮಾಡಿತ್ತು. ಇದರಿಂದ ಭಾರತಕ್ಕೆ ರಾಜತಾಂತ್ರಿಕ ಗೆಲವು ದೊರೆತಿದೆ.

ದಾವೂದ್​ ಇಬ್ರಾಹಿಂ 16 ದೇಶಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಹೊಂದಿದ್ದಾನೆ. ನಕಲಿ ನೋಟು, ಗ್ಯಾಂಬ್ಲಿಂಗ್, ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ ಕಳ್ಳ ಸಾಗಣೆ, ಪೈರಸಿ ಹೀಗೆ ಹಲವು ಅಕ್ರಮ ವ್ಯವಹಾರಗಳನ್ನು ಆತ ಹೊಂದಿದ್ದು, ಈ ಮೂಲಕ ಮೋಸ್ಟ್ ವಾಂಟೆಡ್ ಆಗಿದ್ದಾನೆ.