ದತ್ತಾಂಶ ವಂಚಿಸಿ ಏರ್‌ಟೆಲ್ ಪೇಮೆಂಟ್ ಬ್ಯಾಂಕಿಗೆ ಸಂದಾಯ ಮಾಡಿದ್ದ 138 ಕೋಟಿ ರು. ಆಧಾರ್ ಸಬ್ಸಿಡಿ ಮರಳಿಸಿರುವ ಹಿನ್ನೆಲೆಯಲ್ಲಿ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರ ಸಿಮ್‌ಗೆ ಆಧಾರ್ ಜೋಡಣೆ ಮಾಡಿಸಲು ಜ.10ರ ವರೆಗೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಅನುಮತಿ ನೀಡಿದೆ.
ನವದೆಹಲಿ (ಡಿ.22): ದತ್ತಾಂಶ ವಂಚಿಸಿ ಏರ್ಟೆಲ್ ಪೇಮೆಂಟ್ ಬ್ಯಾಂಕಿಗೆ ಸಂದಾಯಮಾಡಿದ್ದ 138 ಕೋಟಿ ರು. ಆಧಾರ್ ಸಬ್ಸಿಡಿ ಮರಳಿಸಿರುವ ಹಿನ್ನೆಲೆಯಲ್ಲಿ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರ ಸಿಮ್ಗೆ ಆಧಾರ್ ಜೋಡಣೆ ಮಾಡಿಸಲು ಜ.10ರ ವರೆಗೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಅನುಮತಿ ನೀಡಿದೆ.
ಆದರೆ, ಅಂತಿಮ ತನಿಖೆ ಮುಗಿಯುವ ವರೆಗೆ ಮತ್ತುಆಡಿಟ್ ವರದಿ ಬರುವವರೆಗೂ ಏರ್ಟೆಲ್ ಪೇಮೆಂಟ್ ಬ್ಯಾಂಕಿನ ಇಕೆವೈಸಿ ಪರವಾನಗಿಯನ್ನು ಅಮಾನತಿನಲ್ಲಿ ಇಡಲಾಗುವುದು. ಏರ್ಟೆಲ್ ಸಿಮ್ಗೆ ಆಧಾರ್ ಜೋಡಣೆ ಮಾಡುವುದಕ್ಕಷ್ಟೇ ಅನುಮತಿ ನೀಡಿ ಪ್ರಾಧಿಕಾರ ಆದೇಶ ನೀಡಿದೆ.
