ಉಡುಪಿ ಕೃಷ್ಣ ಮಠಕ್ಕೆ ಲಿಖಿತ ಸಂವಿಧಾನ ಬೇಕೆಂಬ ಕೂಗು ಮತ್ತೆ ಕೇಳಿ ಬಂದಿದೆ. ಪೇಜಾವರ ಸ್ವಾಮೀಜಿಗಳ ವಿರುದ್ಧ ಅವರ ಶಿಷ್ಯರಾಗಿದ್ದ ವಿಶ್ವವಿಜಯ ಸ್ವಾಮೀಜಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೃಷ್ಣಮಠದ ಸಂಪ್ರದಾಯಕ್ಕೆ ಅಪಚಾರವಾಗುತ್ತಿದೆ ಎಂಬುದು ಅವರ ವಾದ. ಆದರೆ ಪೇಜಾವರ ಶ್ರೀಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಉಡುಪಿ(ಜ.31): ಉಡುಪಿ ಕೃಷ್ಣ ಮಠಕ್ಕೆ ಲಿಖಿತ ಸಂವಿಧಾನ ಬೇಕೆಂಬ ಕೂಗು ಮತ್ತೆ ಕೇಳಿ ಬಂದಿದೆ. ಪೇಜಾವರ ಸ್ವಾಮೀಜಿಗಳ ವಿರುದ್ಧ ಅವರ ಶಿಷ್ಯರಾಗಿದ್ದ ವಿಶ್ವವಿಜಯ ಸ್ವಾಮೀಜಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೃಷ್ಣಮಠದ ಸಂಪ್ರದಾಯಕ್ಕೆ ಅಪಚಾರವಾಗುತ್ತಿದೆ ಎಂಬುದು ಅವರ ವಾದ. ಆದರೆ ಪೇಜಾವರ ಶ್ರೀಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

Add Asianetnews Kannada as a Preferred SourcegooglePreferred

ವಿಶ್ವವಿಜಯರು ಪೇಜಾವರ ಮಠದ ಸ್ವಾಮೀಜಿಯಾಗಿದ್ದವರು. ವಿಶ್ವೇಶ ತೀರ್ಥರ ಪರಮ ಶಿಷ್ಯರಾಗಿದ್ದರು. ಆದರೆ 80ರ ದಶಕದಲ್ಲಿ ವಿದೇಶಯಾನ ಮಾಡಿ ಪೀಠ ಕಳೆದುಕೊಂಡರು. ಮಠದ ವತಿಯಿಂದ ಮೆಡಿಕಲ್ ಕಾಲೇಜು ಕಟ್ಟಬೇಕೆಂಬ ಆಸೆ ಹೊತ್ತು, ಅಮೇರಿಕಾಗೆ ಹಾರಿದ್ದರು ವಿಶ್ವವಿಜಯರು. ಆದರೆ, ವಿದೇಶಯಾನ ಮಾಧ್ವ ಸಂಪ್ರದಾಯದ ಯತಿಗಳಿಗೆ ನಿಷಿದ್ಧ ಹಾಗಾಗಿ ಪೀಠ ಕಳೆದುಕೊಂಡಿದ್ದ ವಿಶ್ವ ವಿಜಯರು, ಇವಾಗ ತನ್ನ ಮಾಜಿ ಗುರುಗಳ ವಿರುದ್ಧವೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಕೃಷ್ಣಮಠಕ್ಕ ಲಿಖಿತ ಸಂವಿಧಾನ ರೂಪಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ.

ಆದರೆ ಪೇಜಾವರ ಸ್ವಾಮೀಜಿಗಳು ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿರುವ ಬಗ್ಗೆ ನನಗೆ ಗೊತ್ತಿಲ್ಲ. ವಿಶ್ವ ವಿಜಯರು ನನಗೂ ವಿಷಯ ತಿಳಿಸಿದ್ದಾರೆ. ಆದರೆ ನಾನೊಬ್ಬನೇ ತೀರ್ಮಾನ ಕೈಗೊಳ್ಳಲು ಬರಲ್ಲ, ಅಷ್ಟಮಠಾಧೀಶರ ಅಭಿಪ್ರಾಯ ಪಡೆದು ತೀರ್ಮಾನ ಮಾಡ್ತೇವೆ ಅಂತ ರಿಯಾಕ್ಟ್ ಮಾಡಿದ್ದಾರೆ.

16 ವರ್ಷಗಳ ಹಿಂದೆಯೂ ಪೇಜಾವರ ಶ್ರೀಗಳ ಪರ್ಯಾಯದ ಅವಧಿಯಲ್ಲಿ ವಿಶ್ವ ವಿಜಯರು ಅಪಸ್ವರ ಎತ್ತಿದ್ದರು. ಆಗಲೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಕೋರ್ಟ್​ ಮೆಟ್ಟಿಲೇರಲಾಗಿದೆ. ಈ ಧಾರ್ಮಿಕ ಜಿಜ್ಞಾಸೆ ಹೇಗೆ ಕೊನೆಯಾಗುತ್ತೋ ಎನ್ನುವುದೇ ಕುತೂಹಲ.