ಮಣಿಪಾಲ ಕೆಎಂಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮಲತಾ ಕಳೆದ ಮೂರು ದಿನಗಳಿಂದ ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರುತ್ತಿದ್ದಾಳೆ. ಮಹಿಳಾ ಸಾಂತ್ವನ ಕೇಂದ್ರ ಮತ್ತು ಪೊಲೀಸರ ನೆರವಿನಿಂದ ನ್ಯಾಯದ ನಿರೀಕ್ಷೆಯನ್ನು ಎದುರು ನೋಡುತ್ತಿದ್ದಾಳೆ.
ಉಡುಪಿ(ಡಿ.07): ಹುಡುಗಿಯನ್ನು ಪ್ರೀತಿಸುವ ನಾಟಕವಾಡಿ, ಆಕೆ ಗರ್ಭವತಿಯಾಗಿ ಹೆರಿಗೆಯಾದ ನಂತರ ಪ್ರೇಮಿ ಪರಾರಿಯಾದ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ. ಸ್ಥಳೀಯ ಬೈಲೂರು ನಿವಾಸಿ ಎಬ್ನೇಝರ್ ಸದಾನಂದ ಅಂಚನ್ ಎಂಬವರ ಪುತ್ರಿ ಕ್ಲೇಮಿಂಟನಾ ಹೇಮಲತಾ ವಂಚನೆಗೊಳಗಾದವಳು. ನ.28ರಂದು ಮಣಿಪಾಲ ಆಸ್ಪತ್ರೆಯಲ್ಲಿ ಹೇಮಲತಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ನೀರೆ ಗ್ರಾ.ಪಂ.ಸದಸ್ಯ ಹಾಗೂ ರಿಕ್ಷಾ ಚಾಲಕ ಶರತ್ ಶೆಟ್ಟಿ ವಂಚಿಸಿದ ಆರೋಪಿ. ಒಂದು ವರ್ಷದಿಂದ ಇವ್ರಿಬ್ಬರ ಪರಿಚಯವಿದ್ದು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯ ಮನವೊಲಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ. ಮದುವೆಯಾಗೋದಾಗಿಯೂ ಭರವಸೆ ನೀಡಿದ್ದಾನೆ. ಆದ್ರೆ ಆರೋಪಿ ಶರತ್ ಶೆಟ್ಟಿ ಈಗ ಪರಾರಿಯಾಗಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಕೆಎಂಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮಲತಾ ಕಳೆದ ಮೂರು ದಿನಗಳಿಂದ ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರುತ್ತಿದ್ದಾಳೆ. ಮಹಿಳಾ ಸಾಂತ್ವನ ಕೇಂದ್ರ ಮತ್ತು ಪೊಲೀಸರ ನೆರವಿನಿಂದ ನ್ಯಾಯದ ನಿರೀಕ್ಷೆಯನ್ನು ಎದುರು ನೋಡುತ್ತಿದ್ದಾಳೆ. ಹೇಮಲತಾ ತಂದೆ ಸದಾನಂದ ಅಂಚನ್ ಶರತ್ ಶೆಟ್ಟಿಯನ್ನು ಕರೆದು ಮಗಳನ್ನು ಮದುವೆಯಾಗುವಂತೆ ಎಚ್ಚರಿಸಿದ್ರು. ಶರತ್ ತಾನು ಮಾಡಿದ ತಪ್ಪು ಒಪ್ಪಿಕೊಂಡಿದ್ದು, ಆಕೆಯನ್ನು ವಿವಾಹವಾಗುವುದಾಗಿ ಕೂಡ ಹೇಳಿದ್ದ. ಶರತ್ ಸಂಬಂಧಿಕರು ಕೂಡ ಒಪ್ಪಿಗೆ ನೀಡಿದ್ರು. ಅದರಂತೆ ಡಿಸೆಂಬರ್ 2 ಕ್ಕೆ ಮದುವೆ ನೋಂದಾವಣೆಗೆ ತಯಾರೀ ನಡೆಸ್ತಿದ್ರು. ಆದರೆ, ಶರತ್ ಇದೀಗ ಮದುವೆ ನಿರಾಕರಿಸಿದ್ದಲ್ಲದೇ, ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾನೆ.
