ಮಂಗಳವಾರ ಮಾಸಿಕ ಹುಂಡಿ ಲೆಕ್ಕಾಚಾರ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ ಪಾಯಿ ಸಂಗ್ರಹವಾಗಿತ್ತು. ಕಳೆದ ತಿಂಗಳು ನವರಾತ್ರಿ ಇದ್ದ ಕಾರಣ 81 ಲಕ್ಷ ರುಪಾಯಿ ಸಂಗ್ರಹವಾಗಿತ್ತು. ನೋಟ್ ಬ್ಯಾನ್ ನಿಂದ ಆದಾಯ ಹೆಚ್ಚಳವಾಗಿರೋದು ಖಚಿತವಾದ್ರೂ, ಡಿಸೆಂಬರ್ ತಿಂಗಳಲ್ಲಿ ಇನ್ನಷ್ಟು ಆದಾಯ ಬರುವ ಸಾಧ್ಯತೆಯಿದೆ.

ಉಡುಪಿ(ಡಿ.01): ನೋಟ್ ಬ್ಯಾನ್ ನಿಂದ ಜನ ಸಾಮಾನ್ಯರಿಗೆ ಸಮಸ್ಯೆ ಆಗಿರಬಹುದು. ಆದರೆ, ದೇವರ ಆದಾಯ ಮಾತ್ರ ಹೆಚ್ಚಿದೆ. ದೇವಾಲಯಗಳ ನಗರಿ ಉಡುಪಿಯ ಎರಡು ಪ್ರಮುಖ ದೇವಾಲಯಗಳಾದ ಕೊಲ್ಲೂರು ಮತ್ತು ಕೃಷ್ಣಮಠದಲ್ಲಿ ಹುಂಡಿಗೆ ಬಿದ್ದ ಹಣದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಮಂಗಳವಾರ ಮಾಸಿಕ ಹುಂಡಿ ಲೆಕ್ಕಾಚಾರ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ 71 ಲಕ್ಷದ ಮೂವತ್ತೊಂದು ಸಾವಿರ ರುಪಾಯಿ ಹುಂಡಿಗೆ ಬಿದ್ದಿದೆ. ಇದರಲ್ಲಿ 1950 ಐನೂರರ ಹಳೇ ನೋಟಾದ್ರೆ, 636 ಸಾವಿರ ರೂಪಾಯಿ ಹಳೆ ನೋಟು ಅನ್ನೋದು ಗಮನಾರ್ಹ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕೇವಲ 47 ಲಕ್ಷ ರುಪಾಯಿ ಸಂಗ್ರಹವಾಗಿತ್ತು. ಕಳೆದ ತಿಂಗಳು ನವರಾತ್ರಿ ಇದ್ದ ಕಾರಣ 81 ಲಕ್ಷ ರುಪಾಯಿ ಸಂಗ್ರಹವಾಗಿತ್ತು. ನೋಟ್ ಬ್ಯಾನ್ ನಿಂದ ಆದಾಯ ಹೆಚ್ಚಳವಾಗಿರೋದು ಖಚಿತವಾದ್ರೂ, ಡಿಸೆಂಬರ್ ತಿಂಗಳಲ್ಲಿ ಇನ್ನಷ್ಟು ಆದಾಯ ಬರುವ ಸಾಧ್ಯತೆಯಿದೆ.