ದುಬೈ[ಏ.05]: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದುಬೈನ ಅತ್ಯುನ್ನತ ನಾಗರಿಕ ಗೌರವಾದ ‘ಜಾಯೇದ್‌ ಪದಕ’ವನ್ನು ಗುರುವಾರ ಘೋಷಿಸಲಾಗಿದೆ. ಅರಬ್‌ ಸಂಯುಕ್ತ ರಾಷ್ಟ್ರಗಳ ಜೊತೆಗಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗಾಗಿ ರಾಜರು, ವಿವಿಧ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳಿಗೆ ಪ್ರದಾನ ಮಾಡಲಾಗುವ ಈ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘೋಷಿಸಲಾಗಿದೆ ಎಂದು ಅರಬ್‌ ಅಧ್ಯಕ್ಷ ಶೇಖ್‌ ಖಲಿಫಾ ಬಿನ್‌ ಝಯೆದ್‌ ಅಲ್‌ ನಹ್ಯಾನ್‌ ಅವರು ತಿಳಿಸಿದರು.

ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿರುವ ಅಬುದಾಬಿಯ ರಾಜಕುಮಾರ ಮೊಹಮ್ಮದ್‌ ಬಿನ್‌ ಝಾಯೆದ್‌ ಅವರು, ‘ಭಾರತದ ಜೊತೆ ನಾವು ಐತಿಹಾಸಿಕವಾಗಿ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅದನ್ನು ಮತ್ತಷ್ಟುಗಟ್ಟಿಗೊಳಿಸುವಲ್ಲಿ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸಿದ್ದಾರೆ. ಇದಕ್ಕಾಗಿಯೇ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ,’ ಎಂದು ಹೇಳಿದರು.

ಭಾರತ ದೇಶದ ಹೆಮ್ಮೆಯ ಪುತ್ರನಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾಯೇದ್‌ ಪದಕ ಘೋಷಣೆ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ. ಅರಬ್‌ನ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ವಿಇದೇಶಾಗಂ ಸಚಿವೆ ಸುಷ್ಮಾ ಸ್ವರಾಜ್‌ ಅವರು ಹೇಳಿದರು.