Asianet Suvarna News Asianet Suvarna News

ಕಾಲ್ಚೆಂಡಿನ ಮಹಾಕಾಳಗ: ಅಂಡರ್-19 ವಿಶ್ವಕಪ್'ನ ಟೈಮ್ ಟೇಬಲ್

ಒಟ್ಟು 6 ಗುಂಪುಗಳಿದ್ದು, ಪ್ರತೀ ತಂಡಗಳು 3 ಪಂದ್ಯಗಳನ್ನಾಡುತ್ತವೆ. ಆಯಾ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ನೇರ ಪ್ರೀ ಕ್ವಾರ್ಟರ್'ಫೈನಲ್ ಪ್ರವೇಶಿಸುತ್ತವೆ. ಗುಂಪಿನಲ್ಲಿ 3ನೇ ಸ್ಥಾನ ಪಡೆಯುವ 6 ತಂಡಗಳ ಪೈಕಿ ಅತ್ಯುತ್ತಮ 4 ತಂಡಗಳನ್ನ ವಿವಿಧ ಮಾನದಂಡದ ಮೂಲಕ ಆರಿಸಿ ಪ್ರೀ ಕ್ವಾರ್ಟರ್'ಫೈನಲ್'ಗೆ ಬಡ್ತಿ ನೀಡಲಾಗುವುದು.

u 17 fifa world cup schedule

ಬೆಂಗಳೂರು(ಅ. 06): ಆ ದಿನ ಕೊನೆಗೂ ಬಂದೇಬಿಟ್ಟಿದೆ. ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಇಂದು ಆರಂಭಗೊಂಡಿದೆ. 24 ತಂಡಗಳು, 22 ದಿನ, ಒಟ್ಟು 52 ಪಂದ್ಯ. ಭಾರತ ಮೊದಲ ಬಾರಿಗೆ ಫಿಫಾ ಪಂದ್ಯಾವಳಿಗೆ ಆತಿಥ್ಯ ವಹಿಸಿದೆ. ಭಾರತ ತಂಡ ಕೂಡ ಇದೇ ಮೊದಲ ಬಾರಿಗೆ ವಿಶ್ವಕಪ್'ನಲ್ಲಿ ಕಣಕ್ಕಿಳಿಯುತ್ತಿದೆ. ದೇಶದ 6 ನಗರಗಳು ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದ್ದು, ವಿಶ್ವ ಫುಟ್ಬಾಲ್'ನಲ್ಲಿ ಈಗಾಗಲೇ ಹೆಸರು ಮಾಡಿರುವ ಯುವ ಪ್ರತಿಭೆಗಳು ಪಂದ್ಯಾವಳಿಯ ಆಕರ್ಷಣೆ ಹೆಚ್ಚಿಸಲಿದ್ದಾರೆ. ಇಂಗ್ಲೆಂಡ್'ನ ಜೇಡನ್ ಸ್ಯಾಂಟೊ, ಅಮೆರಿಕದ ಜೋಶ್ ಸರ್ಜೆಂಟ್, ಸ್ಪೇನ್'ನ ಅಬೆಲ್ ರೂಯಿಜ್, ಫೆರ್ರಾನ್ ಟೊರೆಸ್, ಜರ್ಮನಿಯ ಜಾನ್-ಫಿಟೆ ಆರ್ಪ್ ಈಗಾಗಲೇ ವಿಶ್ವದ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್'ಗಳಲ್ಲಿ ಆಡಿ ಮಿಂಚಿದ್ದಾರೆ. 3 ಬಾರಿ ಚಾಂಪಿಯನ್ ಬ್ರೆಜಿಲ್, ಯುರೋಪಿಯನ್ ಚಾಂಪಿಯನ್ ಸ್ಪೇನ್ ಹಾಗೂ ಮೆಕ್ಸಿಕೋ ಪ್ರಶಸ್ತಿ ಗೆಲ್ಲುವ ಫೇವರಿಟ್ ಟೀಮ್'ಗಳೆನಿಸಿಕೊಂಡಿವೆ. 2 ಬಾರಿ ಚಾಂಪಿಯನ್ ಘಾನಾ, ಜರ್ಮನಿ, ಇಂಗ್ಲೆಂಡ್ ಹಾಗೂ ಅಮೆರಿಕ ಸಹ ಪ್ರಶಸ್ತಿ ರೇಸ್'ನಲ್ಲಿವೆ.

ಎ ಗುಂಪು:
ಭಾರತ, ಅಮೆರಿಕ, ಕೊಲಂಬಿಯಾ, ಘಾನಾ

ಬಿ ಗುಂಪು:
ಪರಗ್ವೆ, ಮಾಲಿ, ನ್ಯೂಜಿಲೆಂಡ್, ಟರ್ಕಿ

ಸಿ ಗುಂಪು:
ಇರಾನ್, ಗ್ಯುನಿಯಾ, ಜರ್ಮನಿ, ಕೋಸ್ಟ-ರಿಕಾ

ಡಿ ಗುಂಪು:
ಉತ್ತರ ಕೊರಿಯಾ, ನೈಗರ್, ಬ್ರಜಿಲ್, ಸ್ಪೇನ್

ಇ ಗುಂಪು:
ಹೊಂಡುರಾಸ್, ಜಪಾನ್, ನ್ಯೂ ಸಲೆಡೋನಿಯಾ, ಫ್ರಾನ್ಸ್

ಎಫ್ ಗುಂಪು:
ಇರಾಕ್, ಮೆಕ್ಸಿಕೋ, ಚಿಲಿ, ಇಂಗ್ಲೆಂಡ್

ಎಲ್ಲೆಲ್ಲಿ ಪಂದ್ಯಗಳು?:
ಜವಾಹರಲಾಲ್ ನೆಹರೂ ಸ್ಟೇಡಿಯಂ, ನವದೆಹಲಿ
ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ
ಫಟೋರ್ಡಾ ಸ್ಟೇಡಿಯಂ, ಗೋವಾ
ಜವಾಹರಲಾಲ್ ನೆಹರೂ ಸ್ಟೇಡಿಯಂ, ಕೊಚ್ಚಿ
ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂ, ಗುವಾಹತಿ
ಸಾಲ್ಟ್ ಲೇಕ್ ಸ್ಟೇಡಿಯಂ, ಕೋಲ್ಕತಾ

ದಿನಾಂಕ ಪಂದ್ಯ ಸಮಯ ಸ್ಥಳ
ಅ. 6 ಕೊಲಂಬಿಯಾ ವರ್ಸಸ್ ಘಾನಾ ಸಂಜೆ 5ಕ್ಕೆ ನವದೆಹಲಿ
  ನ್ಯೂಜಿಲೆಂಡ್ ವರ್ಸಸ್ ಟರ್ಕಿ ಸಂಜೆ 5ಕ್ಕೆ ನವದೆಹಲಿ
  ಭಾರತ ವರ್ಸಸ್ ಅಮೆರಿಕ ರಾತ್ರಿ 8ಕ್ಕೆ ನವಿ ಮುಂಬೈ
  ಪರಗ್ವೆ ವರ್ಸಸ್ ಮಾಲಿ ರಾತ್ರಿ 8ಕ್ಕೆ ನವಿ ಮುಂಬೈ
ಅ. 7 ಜರ್ಮನಿ ವರ್ಸಸ್ ಕೋಸ್ಟಾರಿಕಾ ಸಂಜೆ 5ಕ್ಕೆ ಗೋವಾ
  ಬ್ರಜಿಲ್ ವರ್ಸಸ್ ಸ್ಪೇನ್ ಸಂಜೆ 5ಕ್ಕೆ ಕೊಚ್ಚಿ
  ಇರಾನ್ ವರ್ಸಸ್ ಗಿನಿಯಾ ರಾತ್ರಿ 8ಕ್ಕೆ ಗೋವಾ
  ಉತ್ತರ ಕೊರಿಯಾ ವರ್ಸಸ್ ನೈಜರ್ ರಾತ್ರಿ 8ಕ್ಕೆ ಕೊಚ್ಚಿ
ಅ. 8 ನ್ಯೂ ಸಲೆಡೋನಿಯಾ ವರ್ಸಸ್ ಫ್ರಾನ್ಸ್ ಸಂಜೆ 5ಕ್ಕೆ ಗುವಾಹತಿ
  ಚಿಲಿ ವರ್ಸಸ್ ಇಂಗ್ಲೆಂಡ್ ಸಂಜೆ 5ಕ್ಕೆ ಕೋಲ್ಕತಾ
  ಹೊಂಡುರಾಸ್ ವರ್ಸಸ್ ಜಪಾನ್ ರಾತ್ರಿ 8ಕ್ಕೆ ಗುವಾಹತಿ
  ಇರಾಕ್ ವರ್ಸಸ್ ಮೆಕ್ಸಿಕೋ ರಾತ್ರಿ 8ಕ್ಕೆ ಕೋಲ್ಕತಾ
ಅ. 9 ಘಾನಾ ವರ್ಸಸ್ ಅಮೆರಿಕ ಸಂಜೆ 5ಕ್ಕೆ ನವದೆಹಲಿ
  ಟರ್ಕಿ ವರ್ಸಸ್ ಮಾಲಿ ಸಂಜೆ 5ಕ್ಕೆ ನವಿ ಮುಂಬೈ
  ಭಾರತ ವರ್ಸಸ್ ಕೊಲಂಬಿಯಾ ರಾತ್ರಿ 8ಕ್ಕೆ ನವದೆಹಲಿ
  ಪರಗ್ವೆ ವರ್ಸಸ್ ನ್ಯೂಜಿಲೆಂಡ್ ರಾತ್ರಿ 8ಕ್ಕೆ ನವಿ ಮುಂಬೈ
ಅ. 10 ಕೋಸ್ಟಾರಿಕಾ ವರ್ಸಸ್ ಗಿನಿಯಾ ಸಂಜೆ 5ಕ್ಕೆ ಗೋವಾ
  ಸ್ಪೇನ್ ವರ್ಸಸ್ ನೈಜರ್ ಸಂಜೆ 5ಕ್ಕೆ ಕೊಚ್ಚಿ
  ಇರಾನ್ ವರ್ಸಸ್ ಜರ್ಮನಿ ರಾತ್ರಿ 8ಕ್ಕೆ ಗೋವಾ
  ಉತ್ತರ ಕೊರಿಯಾ ವರ್ಸಸ್ ಬ್ರಜಿಲ್ ರಾತ್ರಿ 8ಕ್ಕೆ ಕೊಚ್ಚಿ
ಅ. 11 ಫ್ರಾನ್ಸ್ ವರ್ಸಸ್ ಜಪಾನ್ ಸಂಜೆ 5ಕ್ಕೆ ಗುವಾಹತಿ
  ಇಂಗ್ಲೆಂಡ್ ವರ್ಸಸ್ ಮೆಕ್ಸಿಕೋ ಸಂಜೆ 5ಕ್ಕೆ ಕೋಲ್ಕತಾ
  ಹೊಂಡುರಾಸ್ ವರ್ಸಸ್ ನ್ಯೂ ಸಲೇಡೋನಿಯಾ ರಾತ್ರಿ 8ಕ್ಕೆ ಗುವಾಹತಿ
  ಇರಾಕ್ ವರ್ಸಸ್ ಚಿಲಿ ರಾತ್ರಿ 8ಕ್ಕೆ ಕೋಲ್ಕತಾ
ಅ. 12 ಮಾಲಿ ವರ್ಸಸ್ ನ್ಯೂಜಿಲೆಂಡ್ ಸಂಜೆ 5ಕ್ಕೆ ನವದೆಹಲಿ
  ಟರ್ಕಿ ವರ್ಸಸ್ ಪರಗ್ವೆ ಸಂಜೆ 5ಕ್ಕೆ ನವಿ ಮುಂಬೈ
  ಭಾರತ ವರ್ಸಸ್ ಘಾನಾ ರಾತ್ರಿ 8ಕ್ಕೆ ನವದೆಹಲಿ
  ಅಮೆರಿಕ ವರ್ಸಸ್ ಕೊಲಂಬಿಯಾ ರಾತ್ರಿ 8ಕ್ಕೆ ನವಿ ಮುಂಬೈ
ಅ. 13 ಕೋಸ್ಟಾರಿಕಾ ವರ್ಸಸ್ ಇರಾನ್ ಸಂಜೆ 5ಕ್ಕೆ ಗೋವಾ
  ಗಿನಿಯಾ ವರ್ಸಸ್ ಜರ್ಮನಿ ಸಂಜೆ 5ಕ್ಕೆ ಕೊಚ್ಚಿ
  ನೈಜರ್ ವರ್ಸಸ್ ಬ್ರಜಿಲ್ ರಾತ್ರಿ 8ಕ್ಕೆ ಗೋವಾ
  ಸ್ಪೇನ್ ವರ್ಸಸ್ ಉತ್ತರ ಕೊರಿಯಾ ರಾತ್ರಿ 8ಕ್ಕೆ ಕೊಚ್ಚಿ
ಅ. 14 ಫ್ರಾನ್ಸ್ ವರ್ಸಸ್ ಹೊಂಡುರಾಸ್ ಸಂಜೆ 5ಕ್ಕೆ ಗುವಾಹತಿ
  ಜಪಾನ್ ವರ್ಸಸ್ ನ್ಯೂ ಸಲೆಡೋನಿಯಾ ಸಂಜೆ 5ಕ್ಕೆ ಕೋಲ್ಕತಾ
  ಮೆಕ್ಸಿಕೋ ವರ್ಸಸ್ ಚಿಲಿ ರಾತ್ರಿ 8ಕ್ಕೆ ಗುವಾಹತಿ
  ಇಂಗ್ಲೆಂಡ್ ವರ್ಸಸ್ ಇರಾಕ್ ರಾತ್ರಿ 8ಕ್ಕೆ ಕೋಲ್ಕತಾ
ಅ. 16 ಪ್ರೀಕ್ವಾರ್ಟರ್'ಫೈನಲ್ಸ್ 1   ನವದೆಹಲಿ
  ಪ್ರೀಕ್ವಾರ್ಟರ್'ಫೈನಲ್ಸ್ 2   ನವದೆಹಲಿ
ಅ. 17 ಪ್ರೀಕ್ವಾರ್ಟರ್'ಫೈನಲ್ಸ್ 3   ಕೋಲ್ಕತಾ
  ಪ್ರೀಕ್ವಾರ್ಟರ್'ಫೈನಲ್ಸ್ 4   ಮಾರ್ಗೋವಾ
  ಪ್ರೀಕ್ವಾರ್ಟರ್'ಫೈನಲ್ಸ್ 5   ಗುವಾಹತಿ
  ಪ್ರೀಕ್ವಾರ್ಟರ್'ಫೈನಲ್ಸ್ 6   ಮಾರ್ಗೋವಾ
ಅ. 18 ಪ್ರೀಕ್ವಾರ್ಟರ್'ಫೈನಲ್ಸ್ 7   ಕೊಚ್ಚಿ
  ಪ್ರೀಕ್ವಾರ್ಟರ್'ಫೈನಲ್ಸ್ 8   ನವಿ ಮುಂಬೈ
ಅ. 21 ಕ್ವಾರ್ಟರ್'ಫೈನಲ್ 1   ಮಾರ್ಗೋವಾ
  ಕ್ವಾರ್ಟರ್'ಫೈನಲ್ 2   ಗುವಾಹತಿ
ಅ. 22 ಕ್ವಾರ್ಟರ್'ಫೈನಲ್ 3   ಕೋಲ್ಕತಾ
  ಕ್ವಾರ್ಟರ್'ಫೈನಲ್ 4   ಕೊಚ್ಚಿ
ಅ. 25 ಸೆಮಿಫೈನಲ್ 1   ಗುವಾಹತಿ
  ಸೆಮಿಫೈನಲ್ 2   ನವಿ ಮುಂಬೈ
ಅ. 28 ಮೂರನೇ ಸ್ಥಾನಕ್ಕೆ ಪಂದ್ಯ   ಕೋಲ್ಕತಾ
ಅ. 28 ಫೈನಲ್   ಕೋಲ್ಕತಾ

 

ಭಾರತದ ಪಂದ್ಯಗಳ ಪಟ್ಟಿ:
ಅಕ್ಟೋಬರ್ 6: ಅಮೆರಿಕ ವಿರುದ್ಧ
ಅಕ್ಟೋಬರ್ 9: ಕೊಲಂಬಿಯಾ ವಿರುದ್ಧ
ಅಕ್ಟೋಬರ್ 12: ಘಾನಾ ವಿರುದ್ಧ
(ಈ ಮೂರೂ ಪಂದ್ಯಗಳು ನವದೆಹಲಿಯ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆಯಲಿವೆ.)

ಗ್ರೂಪ್ ಹಂತದ ಬಳಿಕ?
ಒಟ್ಟು 6 ಗುಂಪುಗಳಿದ್ದು, ಪ್ರತೀ ತಂಡಗಳು 3 ಪಂದ್ಯಗಳನ್ನಾಡುತ್ತವೆ. ಆಯಾ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ನೇರ ಪ್ರೀ ಕ್ವಾರ್ಟರ್'ಫೈನಲ್ ಪ್ರವೇಶಿಸುತ್ತವೆ. ಗುಂಪಿನಲ್ಲಿ 3ನೇ ಸ್ಥಾನ ಪಡೆಯುವ 6 ತಂಡಗಳ ಪೈಕಿ ಅತ್ಯುತ್ತಮ 4 ತಂಡಗಳನ್ನ ವಿವಿಧ ಮಾನದಂಡದ ಮೂಲಕ ಆರಿಸಿ ಪ್ರೀ ಕ್ವಾರ್ಟರ್'ಫೈನಲ್'ಗೆ ಬಡ್ತಿ ನೀಡಲಾಗುವುದು.

ಪ್ರಸಾರ: ಸೋನಿ ಟೆನ್ ಮತ್ತು ಸೋನಿ ಇಎಸ್'ಪಿಎನ್

(epaperkannadaprabha.com)

Follow Us:
Download App:
  • android
  • ios