ಸುಮಾರು 30 ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಸಿಲುಕಿರುವ ಶಂಕೆಯಿದೆ.

ರೋಣ(ಏ.12): ಕೇಸಿಂಗ್ ಪೈಪ್ ತೆಗೆಯುವ ವೇಳೆ ಕೊಳೆ ಬಾವಿಯೊಳಗೆ ಇಬ್ಬರು ವ್ಯಕ್ತಿಗಳು ಬಿದ್ದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ನಡೆದಿದೆ. ಸವಡಿ ಗ್ರಾಮದ ಜಮೀನೊಂದರಲ್ಲಿ ಬತ್ತಿದ ಕೊಳವೆ ಬಾವಿಯಿಂದ ಕೇಸಿಂಗ್ ಪೈಪ್ ತೆಗೆಯುತ್ತಿದ್ದರು. ಈ ವೇಳೆ ಮಣ್ಣು ಕುಸಿದು ಕೊಳವೆ ಬಾವಿಗೆ ಇಬ್ಬರು ವ್ಯಕ್ತಿಗಳು ಬಿದ್ದಿದ್ದಾರೆ. ಕೊಳವೆ ಬಾವಿಗೆ ಬಿದ್ದವರನ್ನ ಬಸವರಾಜ್ ಮತ್ತು ಶಂಕ್ರಪ್ಪ ಎಂದು ಗುರುತಿಸಲಾಗಿದೆ. 

ಶಂಕ್ರಪ್ಪ ಬಾಣದ ಎಂಬುವರ ಜಮೀನಿನಲ್ಲಿ ಈ ದುರಂತ ಸಂಭವಿಸಿದೆ. ಸುಮಾರು 30 ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಸಿಲುಕಿರುವ ಶಂಕೆಯಿದೆ. ಇಬ್ಬರು ಕಾರ್ಮಿಕರ ರಕ್ಷಣೆಗಾಗಿ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ರೋಣ ಪೊಲೀಸರ ದೌಡಾಯಿಸಿದ್ದು,ಸ್ಥಳಕ್ಕೆ ನೂರಾರು ಜನರು ಜಮಾಯಿಸಿದ್ದಾರೆ.