Asianet Suvarna News Asianet Suvarna News

ಕಳಸಾ ಬಂಡೂರಿ ಹೋರಾಟಕ್ಕೆ ಎರಡು ವರ್ಷ..!: 4 ದಶಕದ ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ

ನೇಗಿಲ ಹಿಡಿಯಬೇಕಾದವನು ಕೈಯಲ್ಲಿ ಕಲ್ಲು ಹಿಡಿದಿದ್ದಾನೆ. ಬೆಳೆ ಬೆಳೆಯಬೇಕಾದವರು ವಾಹನ ಮತ್ತು ಟೈರುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಳಸಾ ಬಂಡೂರಿ ನೀರಿಗಾಗಿ ಅನ್ನದಾತ ಬೀದಿಗಿಳಿದು ಹೋರಾಟಕ್ಕೆ ಧುಮುಕಿ ಇಂದಿಗೆ 2 ವರ್ಷ. ಇವತ್ತಿಗೂ ಹುಬ್ಬಳ್ಳಿ-ಧಾರವಾಡ, ನವಲಗುಂದ  ನರಗುಂದ ಭಾಗದ ಜನರು ಮಹದಾಯಿ ನೀರಿನ  ಹೋರಾಟದಲ್ಲಿ ತೊಡಗಿದ್ದಾರೆ.ರಾಷ್ಟ್ರೀಯ ಹೆದ್ದಾರಿ ತಡೆದ ನೂರಾರು ರೈತರು ಕಳಸಾ ಬಂಡೂರಿ ಜಾರಿಗೆ ಆಗ್ರಹಿಸಿದರು

Two Years For Kalasa Banduri Protest
  • Facebook
  • Twitter
  • Whatsapp

ಹುಬ್ಬಳ್ಳಿ(ಜು.16): ನೇಗಿಲ ಹಿಡಿಯಬೇಕಾದವನು ಕೈಯಲ್ಲಿ ಕಲ್ಲು ಹಿಡಿದಿದ್ದಾನೆ. ಬೆಳೆ ಬೆಳೆಯಬೇಕಾದವರು ವಾಹನ ಮತ್ತು ಟೈರುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಳಸಾ ಬಂಡೂರಿ ನೀರಿಗಾಗಿ ಅನ್ನದಾತ ಬೀದಿಗಿಳಿದು ಹೋರಾಟಕ್ಕೆ ಧುಮುಕಿ ಇಂದಿಗೆ 2 ವರ್ಷ. ಇವತ್ತಿಗೂ ಹುಬ್ಬಳ್ಳಿ-ಧಾರವಾಡ, ನವಲಗುಂದ  ನರಗುಂದ ಭಾಗದ ಜನರು ಮಹದಾಯಿ ನೀರಿನ  ಹೋರಾಟದಲ್ಲಿ ತೊಡಗಿದ್ದಾರೆ.ರಾಷ್ಟ್ರೀಯ ಹೆದ್ದಾರಿ ತಡೆದ ನೂರಾರು ರೈತರು ಕಳಸಾ ಬಂಡೂರಿ ಜಾರಿಗೆ ಆಗ್ರಹಿಸಿದರು.

4 ದಶಕದ ಬೇಡಿಕೆ ಈಡೇರಿಸುವಂತೆ ರೈತರು ಎಷ್ಟೇ ಪ್ರತಿಭಟಿಸಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾತ್ರ ಕ್ಯಾರೆ ಅಂತಿಲ್ಲ. ಮಹಾದಾಯಿ ನದಿ‌ನೀರು ಮಲಪ್ರಭೆಗೆ ಹರಿಸಿ, ಗೋವಾ ಸರ್ಕಾರ ಮೇಲೆ ಒತ್ತಡ ತಂದು ವಿವಾದ ಬಗೆಹರಿಸುವಂತೆ ರೈತರು ಪ್ರತಿಭಡನೆ ನಡೆಸಿದರು. ಕಳಸಾ ಬಂಡೂರಿ ಜಾರಿ  ಜೊತೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡುವಂತೆ ರೈತರು ಒತ್ತಾಯಿಸಿದರು.

ಇನ್ನು ಆಳುವ ಸರ್ಕಾರಗಳು ಅನ್ನದಾತ ನ ಕೂಗಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ .ಇಲ್ಲವಾದರೆ ರೈತರ ತಾಳ್ಮೆ ಕಳೆದುಕೊಂಡು ಮತ್ತೊಂದು ನರಗುಂದ ಬಂಡಾಯಕ್ಕೆ ಮುನ್ನುಡಿ ಬರೆದರೂ ಬರೆಯಬಹುದು.

 

Follow Us:
Download App:
  • android
  • ios