ಭಾರತೀಯ ಸೇನೆ ಏಟಿಗೆ ಪುಲ್ವಾಮಾ ದಾಳಿಯ ಸಂಚುಕೋರ ಫಿನೀಷ್ ಆಗಿದ್ದಾನೆ. ಜಮ್ಮು ಕಾಶ್ಮೀರದ ಟ್ರಾಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ.
ಶ್ರೀನಗರ, (ಮಾ.11): ಜಮ್ಮು ಕಾಶ್ಮೀರದ ಟ್ರಾಲ್ನಲ್ಲಿ ಇಂದು (ಸೋಮವಾರ) ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.
ಮುದಾಸಿರ್ ಅಹ್ಮದ್ ಖಾನ್ ಹಾಗೂ ಖಾಲಿದ್ ಎಂಬ ಇಬ್ಬರು ಜೈಷ್ ಉಗ್ರರು ಸಾವನ್ನಪ್ಪಿದ್ದಾರೆ. ಮುದಾಸಿರ್ ಅಹ್ಮದ್ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ ಎನ್ನಲಾಗಿದೆ.
ಗಡಿಯೊಳಗೆ ನುಸುಳಿದ ಮತ್ತೊಂದು ಪಾಕ್ ಡ್ರೋಣ್, ಅಟ್ಟಾಡಿಸಿದ ಭಾರತೀಯ ಸೇನೆ
ಪುಲ್ವಾಮಾದ ಪಿಂಗ್ಲಿಶ್ನಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಇದ್ದ ಹಿನ್ನೆಲೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಈ ವೇಳೆ ಉಗ್ರರು, ಭದ್ರತಾ ಸಿಬ್ಬಂದಿ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಾರತೀಯ ಸೇನೆ ಕೊಟ್ಟ
ಏಟಿಗೆ ಇಬ್ಬರು ಉಗ್ರರು ಉಡೀಸ್ ಆಗಿದ್ದಾರೆ.
ಫೆ.14ರಂದು ನಡೆದಿದ್ದ ಪುಲ್ವಾಮಾ ದಾಳಿ ಬಳಿಕ ಗಡಿಯಲ್ಲಿ ಉಗ್ರರನ್ನು ಸೆದೆಬಡೆಯಲು ಭಾರತೀಯ ಸೇನೆ ಪಣತೊಟಟು ನಿಂತಿದೆ.
