ಅಚ್ಚರಿ ಎಂಬಂತೆ ಮುಲಯಾಂ ಸಿಂಗ್ ಯಾದವ್, ಅವರ ಕಿರಿಯ ಪುತ್ರ ಪ್ರತೀಕ್ ಸೊಸೆ ಅಪರ್ಣಾ ಇಂದು ಬೆಳಿಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನು ಅವರ ಭೇಟಿ ಮಾಡಿದರು.

ನವದೆಹಲಿ (ಮಾ.24): ಅಚ್ಚರಿ ಎಂಬಂತೆ ಮುಲಯಾಂ ಸಿಂಗ್ ಯಾದವ್, ಅವರ ಕಿರಿಯ ಪುತ್ರ ಪ್ರತೀಕ್ ಸೊಸೆ ಅಪರ್ಣಾ ಇಂದು ಬೆಳಿಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನು ಅವರ ಭೇಟಿ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಕ್ನೋದಲ್ಲಿರುವ ಸಯೋಗಿ ಆದಿತ್ಯ ನಾಥ್ ರವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಅಪರ್ಣಾರವರು ಕಾಂಗ್ರೆಸ್ ಕಮ್ ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಷಿ ವಿರುದ್ಧ ಪರಾಭವಗೊಂಡಿದ್ದರು. ರಾಜಕೀಯ ವೈರಿಗಳಾದ ಇವರು ಏನು ಮಾತನಾಡಿರಬಹುದೆನ್ನುವುದು ಸದ್ಯದ ಕುತೂಹಲವಾಗಿದೆ.

ಇಂಟರೆಸ್ಟಿಂಗ್ ವಿಚಾರ ಅಂದರೆ ಪ್ರತೀಕ್ ಹಾಗೂ ಅಪರ್ಣಾ ನರೇಂದ್ರ ಮೋದಿಯವರ ಅಭಿಮಾನಿಗಳಂತೆ! ತಮ್ಮ ನಿವಾಸದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನರೇಂದ್ರ ಮೋದಿ ಜೊತೆ ಇವರು ಸೆಲ್ಫಿ ತೆಗೆದುಕೊಂಡಿರುವುದು ವ್ಯಾಪಕವಾಗಿ ಹರಿದಾಡಿತ್ತು.