ತುಮಕೂರು (ಏ.  29)   ಸಿಇಟಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳು ಕಾರು ಅಪಘಾತದಲ್ಲಿ ದಾರುಣ ಸಾವಿಗೀಡಾಗಿದ್ದಾರೆಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಸಾವು

ತಿಪಟೂರಿನ ಕೆಬಿ ಕ್ರಾಸ್ ಕುಂದೂರು ಪಾಳ್ಯದ  ಬಳಿಯ ಅಪಘಾತ ವಿದ್ಯಾರ್ಥಿಗಳ ಪ್ರಾಣ ಹೊತ್ತೊಯ್ದಿದೆ. ನೇರಳೆ ಮರಕ್ಕೆ ಕಾರು ಗುದ್ದಿದ್ದು  ಸ್ಥಳದಲ್ಲೇ  ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಅಪಘಾತದದಲ್ಲಿ ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದೆ.#

ಅಯ್ಯೋ ವಿಧಿಯೇ..! ಮಗುವಿನ ಜೀವ ಉಳಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು

ವಿದ್ಯಾರ್ಥಿಗಳಾದ ಕಿರಣ್ (18)ಹಾಗೂ ತ್ರಿನೇಶ್ (20) ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ತೆರಳುತ್ತಿದ್ದರು. ಮೃತರು  ತುರುವೇಕೆರೆ ತಾಲೂಕು ದಂಡಿನಶಿವರದವರು. ಗಾಯಾಳು ವಿದ್ಯಾರ್ಥಿಗಳನ್ನು ತುರುವೇಕೆರೆ ಹಾಗೂ ದಂಡಿನಶಿವರ ಆಸ್ಪತ್ರೆಗೆ ದಾಖಲಿಸಲಾಗಿದ್ದು  ಕೆಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.