ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ರಾಮ ಚಂದ್ರಾಪುರ ಮಠವನ್ನು ಅಶ್ಲೀಲ, ಅವಹೇಳನಕಾರಿಯಾಗಿ ಬಿಂಬಿಸಿ ಸಂದೇಶಗಳನ್ನು ಹಾಕುತ್ತಿದ್ದ ಇಬ್ಬರನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಂಗಳೂರು (ಡಿ.17): ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ರಾಮ ಚಂದ್ರಾಪುರ ಮಠವನ್ನು ಅಶ್ಲೀಲ, ಅವಹೇಳನಕಾರಿಯಾಗಿ ಬಿಂಬಿಸಿ ಸಂದೇಶಗಳನ್ನು ಹಾಕುತ್ತಿದ್ದ ಇಬ್ಬರನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಗರ ತಾಲೂಕಿನ ಗಣಪತಿ ಭಟ್ ಜಿಗಳೆ ಮನೆ, ನಿರಂಜನ ಕುಗ್ವೆ ಬಂಧಿತರು. ಫೇಸ್ ಬುಕ್’ನ ಸತ್ಯ ಶೋಧ ಮಿತ್ರ ಮಂಡಳಿ ಎಂಬ ಗ್ರೂಪ್ ಅಡ್ಮಿನ್ ಆಗಿರುವ ಗಣಪತಿ ಭಟ್, ಶ್ರೀ ರಾಮಚಂದ್ರಾಪುರ ಮಠವನ್ನು ಅಶ್ಲೀಲವಾಗಿ ಅವಹೇಳನಕರವಾಗಿ ಬಿಂಬಿಸಿ ಸಂದೇಶಗಳನ್ನು ಹಾಕಿದ್ದರು.

ಇದನ್ನು ಗಮನಿಸಿದ ಮಹಿಳೆಯೊಬ್ಬರು ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಸೆ.13ರಂದು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನೂ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.