ಶ್ರೀನಗರ: ಸೇನಾ ಕಾರ್ಯಾಚರಣೆಗೆ ಇಬ್ಬರು ಉಗ್ರರು ಬಲಿ

Two Militants Gunned Down By Security Forces
Highlights

  • ಕರಣ್ ನಗರ ಪ್ರದೇಶದ ನಿರ್ಮಾಣ ಹಂತದ ಕಟ್ಟಡದಲ್ಲಿ ಅವಿತಿದ್ದ ಉಗ್ರರು
  • ಸಿಆರ್’ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಲು ಉಗ್ರರು ಯತ್ನಿಸಿದ ಬೆನ್ನಲ್ಲೇ ಗುಂಡಿನ ಚಕಮಕಿ

ಶ್ರೀನಗರ: ಶ್ರೀನಗರದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದ  ಕರಣ್ ನಗರ ಪ್ರದೇಶದಲ್ಲಿ ಕಟ್ಟಡವೊಂದರಲ್ಲಿ ಉಗ್ರರು ಅವಿತಿದ್ದರು ಎನ್ನಲಾಗಿದೆ.

ನಿನ್ನೆ ಸಿಆರ್’ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಲು ಉಗ್ರರು ಯತ್ನಿಸಿದ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು.

ಹತರಾದ ಉಗ್ರರ ಬಗ್ಗೆ ಯಾವುದೇ ಮಾಹಿತಿಗಳು ಈವರಗೆ ಲಭ್ಯವಾಗಿಲ್ಲ. ಉಗ್ರರು ಕರಣ್ ನಗರದ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದರು, ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಜಮ್ಮುವಿನ ಸುಂಜುವಾನ್’ನಲ್ಲಿ ಜೈಶೆ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದರು.  ದಾಳಿಯಲ್ಲಿ 6 ಯೋಧರು ಸೇರಿದಂತೆ 7 ಮಂದಿ ಹುತಾತ್ಮರಾಗಿದ್ದರು. ಸೇನೆಯ ಪ್ರತಿದಾಳಿಗೆ ಮೂವರು ಉಗ್ರರು ಹತರಾಗಿದ್ದರು.

(ಸಾಂದರ್ಭಿಕ ಚಿತ್ರ)

loader