ಇವಳು ನನ್ನವಳು, ನನ್ನವಳು ಅಂತ ಮಹಿಳೆಯೊಬ್ಬಳಿಗಾಗಿ ಪುರುಷರಿಬ್ಬರು ಬಡಿದಾಡಿಕೊಂಡ ಘಟನೆ ಬೆಂಗಳೂರು -ಮಂಗಳೂರು ರಾಷ್ಟೀಯ ಹೆದ್ದಾರಿ 4 ರ ಪಕ್ಕದ ಬಾವಿಕೆರೆ ಕ್ರಾಸ್ ಬಳಿ ಶನಿವಾರ ನಡೆದಿದೆ.

ನೆಲಮಂಗಲ: ಇವಳು ನನ್ನವಳು, ನನ್ನವಳು ಅಂತ ಮಹಿಳೆಯೊಬ್ಬಳಿಗಾಗಿ ಪುರುಷರಿಬ್ಬರು ಬಡಿದಾಡಿಕೊಂಡ ಘಟನೆ ಬೆಂಗಳೂರು -ಮಂಗಳೂರು ರಾಷ್ಟೀಯ ಹೆದ್ದಾರಿ 4 ರ ಪಕ್ಕದ ಬಾವಿಕೆರೆ ಕ್ರಾಸ್ ಬಳಿ ಶನಿವಾರ ನಡೆದಿದೆ. ಚಿಕ್ಕಬಿದರಕಲ್ಲು ನಿವಾಸಿ ಮೂರ್ತಿ ಮತ್ತು ಚಾಮಗೊಂಡ್ಲು ಹೋಬಳಿಯ ಭೈರನಾಯಕನಹಳ್ಳಿ ನಿವಾಸಿ ಸಿದ್ದು ಬಡಿದಾಡಿಕೊಂಡ ಪುರುಷರಾಗಿದ್ದಾರೆ. ಮೊದಲೇ ವಿವಾಹವಾಗಿ ವಿಚ್ಛೇದನ ಪಡೆದಿದ್ದ ಮಹಿಳೆ ಮತ್ತು ಮೂರ್ತಿ ಸ್ನೇಹಿತರಾಗಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಮೂರ್ತಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಆದರೆ, ವಿಚ್ಛೇದಿತೆ ಮಹಿಳೆ ಮೂರ್ತಿ ತನನ್ನು ವಿವಾಹವಾಗಲ್ಲ ಎಂದು ತಿಳಿದು ಆತನಿಂದ ದೂರವಾಗಿದ್ದಳು. ಬಳಿಕ ಭೈರನಾಯಕನಹಳ್ಳಿ ಗ್ರಾಮದ ಸಿದ್ದು ಎಂಬಾತನ ಪರಿಚಯವಾಗಿದೆ. ನಂತರ ಮಹಿಳೆ ಮತ್ತು ಸಿದ್ದು ನಡುವೆ ಸ್ನೇಹ ಬೆಳೆದಿದೆ. ಹೀಗಾಗಿ ಮೂರ್ತಿ ಮತ್ತು ಸಿದ್ದು ಬಡಿದಾಡಿಕೊಂಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.