ರಾಜ್'ಕುಮಾರ್ ದೇವಾಂಗನ್ ಮತ್ತು ಮಯಂಕ್ ಶೀಲ್ ಚೌಹಾಣ್ ಅವರಿಗೆ ಮೂರು ತಿಂಗಳು ಸಂಬಳ ಕೊಟ್ಟು ತತ್'ಕ್ಷಣದಿಂದಲೇ ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ.

ನವದೆಹಲಿ(ಜ. 17): ಸರಿಯಾಗಿ ಜವಾಬ್ದಾರಿ ನಿಭಾಯಿಸಲು ವಿಫಲರಾದ ಕಾರಣವೊಡ್ಡಿ ಕೇಂದ್ರ ಸರಕಾರವು ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದೆ. 1992ರ ಛತ್ತೀಸ್'ಗಢ ಕೆಡರ್ ಬ್ಯಾಚ್'ನ ರಾಜಕುಮಾರ್ ದೇವಾಂಗನ್ ಹಾಗೂ 1998ರ ಎಜಿಎಂಯು ಕೆಡರ್ ಬ್ಯಾಚ್'ನ ಮಯಂಕ್ ಶೀಲ್ ಚೌಹಾಣ್ ಅವರನ್ನು ಸೇವೆಯಿಂದ ವಿಮುಕ್ತಗೊಳಿಸಲಾಗಿದೆ. ಆಯಾ ರಾಜ್ಯದ ಕೆಡರ್ ಮಾಡಿದ ಶಿಫಾರಸಿನ ಆಧಾರದ ಮೇಲೆ ಗೃಹ ಇಲಾಖೆ ಈ ಕ್ರಮ ಕೈಗೊಂಡಿದೆ. ಕಳೆದ 15 ವರ್ಷಗಳಲ್ಲಿ ಇಂತಹ ಕಡ್ಡಾಯ ನಿವೃತ್ತಿ ಕೊಟ್ಟು ಮನೆಗೆ ಕಳುಹಿಸಿದ ಪ್ರಕರಣ ನಡೆದಿರುವುದು ಇದೇ ಮೊದಲೆನ್ನಲಾಗಿದೆ.

Add Asianetnews Kannada as a Preferred SourcegooglePreferred

ರಾಜ್'ಕುಮಾರ್ ದೇವಾಂಗನ್ ಮತ್ತು ಮಯಂಕ್ ಶೀಲ್ ಚೌಹಾಣ್ ಅವರಿಗೆ ಮೂರು ತಿಂಗಳು ಸಂಬಳ ಕೊಟ್ಟು ತತ್'ಕ್ಷಣದಿಂದಲೇ ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ. ಇವರಿಗೆ ಮಾಮೂಲಿ ರೀತಿಯ ನಿವೃತ್ತಿ ಸೌಲಭ್ಯಗಳೆಲ್ಲವೂ ದೊರಕುತ್ತವೆ.

ಇತ್ತೀಚೆಗೆ, ಇಬ್ಬರು ಐಎಎಸ್ ಅಧಿಕಾರಿಗಳನ್ನೂ ಅಸಮರ್ಪಕರ ಕಾರ್ಯನಿರ್ವಹಣೆಯ ಕಾರಣವೊಡ್ಡಿ ಇದೇ ರೀತಿ ಕಡ್ಡಾಯ ನಿವೃತ್ತಿ ಕೊಟ್ಟು ಮನೆಗೆ ಕಳುಹಿಸಲಾಗಿತ್ತು.

ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಕೊಡುವ ಅಧಿಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಇದೆ. ಅಧಿಕಾರಿಯು 15 ವರ್ಷ ಅಥವಾ 25 ವರ್ಷ ಸೇವಾವಧಿ ಹಂತ ತಲುಪಿದಾಗ; ಅಥವಾ ಅಧಿಕಾರಿ ವಯಸ್ಸು 50 ವರ್ಷವಾದಾಗ ಅವರನ್ನು ಕಡ್ಡಾಯ ನಿವೃತ್ತಿಗೆ ಒಳಪಡಿಸಬಹುದಾಗಿದೆ. ರಾಜ್ಯ ಸರಕಾರದ ಸಲಹೆಯ ಆಧಾರದ ಮೇಲೆ ಗೃಹ ಇಲಾಖೆ ಕ್ರಮ ಕೈಗೊಳ್ಳುತ್ತದೆ.