ಸಿಡಿಲು ಬಡಿದು ಇಬ್ಬರು ದುರ್ಮರಣ

ಕಲಬುರಗಿ(ಸೆ.29): ಜಿಲ್ಲೆಯಾದ್ಯಂತ ಮುಂದುವರೆದ ವರುಣನ ಆರ್ಭಟದಿಂದ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ.

ತೊನಸನಹಳ್ಳಿ (ಟಿ) ಗ್ರಾಮದಲ್ಲಿ ಬಸಮ್ಮ (40), ಅಂಬಿಕಾ (43) ಸಿಡಿಲು ಬಡಿದು ಮೃತಪಟ್ಟಿದ್ದು, ಆಂಜೇನಮ್ಮ ಎಂಬ ಇನ್ನೋರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮೀನಿನಲ್ಲಿ ಕಳೆ‌ ಕಿಳುವಾಗ ಸಿಡಲು ಬಡಿದಿದೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.