ಚರ್ಚ್ ದಾಳಿ ವದಂತಿ ಹಬ್ಬಿಸುತ್ತಿದ್ದ ಇಬ್ಬರ ಬಂಧನ

First Published 31, May 2018, 9:07 PM IST
Two arrested for rumors of Church attack
Highlights

ಚರ್ಚ್ ದಾಳಿ ಹೆಸರಿನಲ್ಲಿ ಸುಳ್ಳು ಸಂದೇಶ ರವಾನಿಸುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಸುನೀಲ್ ವೇಗಸ್ (34) ಮತ್ತು ಸಚಿತ್ ಪಿ.ಪಿ (23) ಬಂಧಿತರು.

ಮಂಗಳೂರು(ಮೇ 31): ಚರ್ಚ್ ದಾಳಿ ಹೆಸರಿನಲ್ಲಿ ಸುಳ್ಳು ಸಂದೇಶ ರವಾನಿಸುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಸುನೀಲ್ ವೇಗಸ್ (34) ಮತ್ತು ಸಚಿತ್ ಪಿ.ಪಿ (23) ಬಂಧಿತರು.

ಎನ್.ಆರ್. ಪುರ ನಿವಾಸಿಗಳಾದ ಇವರಿಬ್ಬರು ಚರ್ಚ್ ದಾಳಿಯ ಕುರಿತು ಸುಳ್ಳು ವದಂತಿ ಹಬ್ಬಿಸುತ್ತಿದ್ದರು ಎನ್ನಲಾಗಿದೆ. ಮಂಗಳೂರು ಸೆಂಟ್ರಲ್ ಉಪ ವಿಭಾಗದ ಎಸಿಪಿ ತಂಡ ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ಬಂಧಿಸಿದೆ. ಇವರಿಬ್ಬರು ಹಳೆಯ ವಿಡಿಯೋಗಳನ್ನು ಹರಿಬಿಟ್ಟು ಮಂಗಳೂರನಲ್ಲಿ ಮತ್ತೆ ಚರ್ಚ್ ದಾಳಿ ಆರಂಭವಾಗಿದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿ ಸುಳ್ಳು ಸುದ್ದಿ ಹರಡಿ ಕೋಮು ಸಾಮರಸ್ಯ ಕದಡಲು ಹುನ್ನಾರ ನಡೆಸಿದ್ದಾಗಿ ಇಬ್ಬರೂ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ವದಂತಿಗಳನ್ನು ಹರಡುವ ಯೋಜನೆ ಕೂಡ ರೂಪಿಸಿದ್ದಾಗಿ ಇಬ್ಬರೂ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

loader