ನವದೆಹಲಿ(ಜ.30): ಜನಪ್ರಿಯ ಬರಹಗಾರ್ತಿ ಮತ್ತು ಹೋರಾಟಗಾರ್ತಿ ಮಧು ಕಿಶ್ವರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾಡಿದ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫ್ರೀ ಸೆಕ್ಸ್ ಕುರಿತು ಮಾತನಾಡಿ ಮಧು ಟ್ರೋಲ್‌ಗೆ ಒಳಗಾಗಿದ್ದಾರೆ.

ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಮಾರಂಭಗಳಲ್ಲಿ ನೀಡುತ್ತಿರುವ ಭರವಸೆಗಳನ್ನು ಅಪಹಾಸ್ಯ ಮಾಡಿರುವ ಮಧು ಕಿಶ್ವರ್, ರಾಹುಲ್ ಪುರುಷರಿಗೆ ವರ್ಷದಲ್ಲಿ ಇಂತಿಷ್ಟು ದಿನ ಉಚಿತ ಸೆಕ್ಸ್ ಯೋಜನೆಯನ್ನೂ ಜಾರಿಗೆ ತರಬಹುದು ಎಂದು ಕುಹುಕವಾಡಿದ್ದರು.

ಮಧು ಅವರ ಈ ಟ್ವೀಟ್‌ ಭಾರೀ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗುತ್ತಿದೆ. ಮಧು ಟ್ವೀಟ್‌ಗೆ ರಿಟ್ವೀಟ್ ಮಾಡಿರುವ ಹಲವರು ಸೆಕ್ಸ್ ಯಾವಾಗಲೂ ಉಚಿತವಾಗಿಯೇ ಇರುತ್ತದೆ. ಬಹುಶಃ ಮಧು ಅವರು ಮಾತ್ರ ಹಣ ಪಡೆಯುತ್ತಾರೆ ಎಂದು ಕಾಲೆಳೆದಿದ್ದಾರೆ.