ಪಾಕಿಸ್ತಾನಲ್ಲಿ ಉಂಟಾಗಿರುವ ರಾಜಕಾರಣದ ಅತಂತ್ರ ಸ್ಥಿತಿಯನ್ನು ಟ್ರೊಲಿಗರು ಹೇಗೆ ಬೇಕೋ ಹಾಗೆ ಆಡಿಕೊಂಡಿದ್ದಾರೆ ಒಂದು ಕಡೆ ಹಾಸ್ಯ ಮಾಡುತ್ತ ಇನ್ನೊಂದು ಕಡೆ ಸರಿಯಾದ ಪಂಚ್ ನೀಡಿದ್ದಾರೆ. ಜಸ್ಟ್ ಎಂಜಾಯ್..
ಕರಾಚಿ[ಜು.26]:ಪಾಕಿಸ್ತಾನದಲ್ಲಿ ಚುನಾವಣೆ ಮುಗಿದು ಫಲಿತಾಂಶ ಬಂದಿದೆ. ಪಾಕಿಸ್ತಾನ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಯಾವೊಂದು ಪಕ್ಷವು ಸ್ಪಷ್ಟ ಬಹುಮತ ಗಳಿಸಲು ಸಫಲವಾಗಿಲ್ಲ. ಮಾಜಿ ಕ್ರಿಕೆಟಿಗ ಕಂ ರಾಜಕಾರಣಿ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 272 ಸ್ಥಾನಗಳಲ್ಲಿ ಪಿಟಿಐ ಪಕ್ಷ 112 ಸ್ಥಾನಗಳನ್ನು ಗೆದ್ದುಕೊಂಡರೆ, ನವಾಜ್ ಷರೀಫ್ ಪಕ್ಷ 65 ಸ್ಥಾನ ಹಾಗೂ ಪಿಪಿಪಿ ಪಕ್ಷ 43 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ.
ಇದನ್ನೇ ಇಟ್ಟುಕೊಂಡಿರುವ ಸೋಶಿಯಲ್ ಮೀಡಿಯಾ ಮಂದಿ ಬೆಳಗ್ಗೆಯಿಂದ ಒಂದೆ ಸಮನೆ ಟ್ರೋಲ್ ಮಾಡಿದ್ದಾರೆ.ವಿವಿಧ ಚಿತ್ರಗಳನ್ನು ಹಾಕಿ ಹೇಗೆ ಬೇಕೋ ಹಾಗೆ ಆಡಿಕೊಂಡಿದ್ದಾರೆ.
