ಭಾರತೀಯ ರಾಯಭಾರಿಯ ಟ್ವಿಟರ್ ಖಾತೆಯೇ ಹ್ಯಾಕ್!

news | Sunday, January 14th, 2018
Suvarna Web Desk
Highlights
  • ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್
  • ಖಾತೆಯಲ್ಲಿ ಪಾಕಿಸ್ತಾನದ ಧ್ವಜಗಳ ಫೋಟೋಗಳು!

ನವದೆಹಲಿ: ಹ್ಯಾಕರ್’ಗಳ ಕೈಚಳಕಕ್ಕೆ ವಿಶ್ವಸಂಸ್ಥೆಯಲ್ಲಿರುವ ಭಾರತದ ರಾಯಭಾರಿಯೇ  ಈ ಬಾರಿ ಬಲಿಯಾಗಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರ ಟ್ವೀಟರ್ ಖಾತೆಯನ್ನು ಹ್ಯಾಕರ್’ಗಳು ಹ್ಯಾಕ್ ಮಾಡಿದ್ದಾರೆ.

ಅಕ್ಬರುದ್ದೀನ್ ಅವರ ಟ್ವೀಟರ್ ಖಾತೆಯಲ್ಲಿ ಪಾಕಿಸ್ತಾನದ ಧ್ವಜಗಳ ಫೋಟೋಗಳು ಹಾಗೂ ಪಾಕ್ ಅಧ್ಯಕ್ಷ ಮಮ್ನೂನ್ ಹುಸೇನ್ ಅವರ ಫೋಟೋಗಳನ್ನು ಪೋಸ್ಟ್’ ಮಾಡಲಾಗಿದೆ.

ಭಾನುವಾರ ಬೆಳಗ್ಗಿನ ಜಾವದಲ್ಲಿ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಅಧಿಕೃತ ಖಾತೆಯೆಂದು ಸೂಚಿಸಲು ಇರುವ ನೀಲಿ ಬಣ್ಣದ ಗುರುತನ್ನು ಕೂಡಾ ಅಳಿಸಿ ಹಾಕಲಾಗಿತ್ತು.

ಹ್ಯಾಕ್ ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ವಿವಾದಾತ್ಮಕ ಟ್ವೀಟ್’ಗಳನ್ನು ಅಳಿಸಿ ಹಾಕಲಾಗಿದೆ.  

Comments 0
Add Comment