ಹಾಸನ ಜಿಲ್ಲೆ ಸಕಲೇಶಪುರ ವಿಭಾಗದ ಸಾರಿಗೆ ಬಸ್ ಚಾಲಕನ ಲವ್ ಕಹಾನಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಟು ವೇ ಕಹಾನಿಯ ಅಸಲಿಯತ್ತನ್ನು ಮೊಬೈಲ್ ಮೆಸೇಜ್'ಗಳು ಬಯಲು ಮಾಡಿವೆ.

ಹಾಸನ(ಆ.28): ಹಾಸನ ಜಿಲ್ಲೆ ಸಕಲೇಶಪುರ ವಿಭಾಗದ ಸಾರಿಗೆ ಬಸ್ ಚಾಲಕನ ಲವ್ ಕಹಾನಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಟು ವೇ ಕಹಾನಿಯ ಅಸಲಿಯತ್ತನ್ನು ಮೊಬೈಲ್ ಮೆಸೇಜ್'ಗಳು ಬಯಲು ಮಾಡಿವೆ.

ಹಾಸನದ ಆದರಗೆರೆ-ದೊಡ್ಡನಹಳ್ಳಿಯ ಎಲ್​ಎಲ್​ಬಿ ವಿದ್ಯಾರ್ಥಿನಿ ತನುಶ್ರೀ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಸಾರಿಗೆ ಬಸ್ ಚಾಲಕ ಸಂತೋಷ್ ಕಾರಣ ಎಂದು ಈ ಹಿಂದೆ ಆರೋಪಿಸಲಾಗಿತ್ತು. ತನುಶ್ರೀ ಪೋಷಕರು ನಮ್ಮ ಮಗಳ ಸಾವಿಗೆ ಸಂತೋಷನೇ ಕಾರಣ. ಆತ ನನ್ನನ್ನು ಪ್ರೀತಿಸು, ಮದುವೆಯಾಗು ಎಂದು ತಮ್ಮ ಮಗಳಿಗೆ ಬಲವಂತ ಮಾಡುತ್ತಿದ್ದ. ಆತನ ಕಿರುಕುಳದಿಂದಲೇ ಮಗಳು ವಿಷ ಕುಡಿದು ಸತ್ತಿದ್ದಾಳೆ ಎಂದು ದೂರಿದ್ದರು. ಇದಕ್ಕೆ ಪುಷ್ಟಿ ಎಂಬಂತೆ ತನುಶ್ರೀ ಸಹ ಸಾಯುವ ಮುನ್ನ ಸಂತೋಷನ ವಿರುದ್ಧ ಹೇಳಿಕೆ ನೀಡಿದ್ದಳು.

ಆದರೀಗ ಸಂತೋಷ್'​​ದು ಒನ್ ವೇ ಲವ್ ಅಲ್ಲ ಅಥವಾ ಬಲವಂತ ಸಹ ಮಾಡಿಲ್ಲ. ಬದಲಾಗಿ ತನುಶ್ರೀಯೂ ಸಹ ಸಂತೋಷನನ್ನು ಅತಿಯಾಗಿ ಪ್ರೀತಿಸಿದ್ದಳು. ಮಾನಸಿಕವಾಗಿ ಪತಿ ಅಂತಲೇ ಸ್ವೀಕಾರ ಮಾಡಿದ್ದಳು. ನೀನು ನಮ್ಮ ಮನೆಯವರಿಗೆ ಪೋನ್ ಮಾಡಿ ನನ್ನನ್ನು ಮದುವೆ ಮಾಡಿಕೊಡುವಂತೆ ಕೇಳು ಎಂದು ಹೇಳಿದ್ದ ನಿಜ ಸಂಗತಿ ಆಕೆ ಸಂತೋಷ್​ಗೆ ಮಾಡಿರುವ ಹತ್ತಾರು ಮೆಸೇಜ್ ಗಳಿಂದ ಬಯಲಾಗಿದೆ.